ವಿದ್ಯುತ್ ಶಾರ್ಟ್ ಸರ್ಕ್ಯೂಟ್ : ಮನೆ ಸೇರಿ ಅಪಾರ ಹಾನಿ..!

 

ಕೃಷಿ ಪ್ರಿಯ ನ್ಯೂಸ್ |

ಸಂಗಮೇಶ ಮುಶಿಗೇರಿ

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಯರಗೇರಾ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್’ನಿಂದಾಗಿ ಮನೆವೊಂದಕ್ಕೆ ಬೆಂಕಿ ತಗುಲಿ ಅಪಾರ ಹಾನಿಯಾದ ಘಟನೆ ಸಂಭವಿಸಿದೆ..!

ದೊಡ್ಡಪ್ಪ ಶರಣಪ್ಪ ಗರ್ಚಿನಮನೆ ಎಂಬುವರಿಗೆ ಸೇರಿದ ಜೆಂತಿ ಮನೆ ಇದಾಗಿದೆ. 15 ತೊಲೆ ಬಂಗಾರ ಸೇರಿದಂತೆ ಸುಮಾರು 8 ಲಕ್ಷ ರೂಪಾಯಿಗಳ ಹಣ, ದವಸ ದಾನ್ಯ ಇತರೆ ಗೃಹ ಬಳಕೆ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಯಾವುದೇ ಜೀವಹಾನಿ ಸಂಭವಿಸಿಲ್ಲ. ವಿಷಯ ತಿಳಿದು ಸ್ಥಳಕ್ಕೆ ದಾವಿಸಿ ಮನೆಯಲ್ಲಿದ್ದ ಸಿಲಿಂಡರ್ ಹೊರಕ್ಕೆ ತೆಗೆದು ಮುಂದೆ ಸಂಭವಿಸಬೇಕಾದ ಅನಾಹುತ ತಪ್ಪಿಸಲಾಗಿದೆ ಎಂದು ಅಗ್ನಿಶಾಮಕ ಠಾಣಾಧಿಕಾರಿ ರಾಜು ನರಸಪ್ಪ ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಬೆಂಕಿ ನಂದಿಸುವಲ್ಲಿ ಡ್ರೈವರ್ ಅಸ್ಲಂ ಕೋಣೇಕರ್, ಅಗ್ನಿಶಾಮಕ ಸಿಬ್ಬಂದಿ ಪ್ರವೀಣ, ಶಿವಮೂರ್ತಿ ಯಶಸ್ವಿಯಾಗಿದ್ದಾರೆ..!!