ಮಹಾಂತಪ್ಪ ಹೊಸವಕ್ಕಲ ಇನ್ನಿಲ್ಲ..!

 

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಕೋಕೀಲಾ ಸರ್ಕಲ್ ಹತ್ತಿರದ ನಿವಾಸಿ ಬಣಜಿಗ ಸಮುದಾಯದ ಹಿರಿಯ ಜೀವಿ ಮಹಾಂತಪ್ಪ ಕಳಕಪ್ಪ ಹೊಸವಕ್ಕಲ (75) ಮಂಗಳವಾರ ನಮ್ಮನ್ನಗಲಿದ್ದಾರೆ..!

ಅನಾರೋಗ್ಯದ ಕಾರಣದಿಂದ ಧಾರವಾಡ ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ ಸೇರಿ ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗ ಅಗಲಿದ್ದಾರೆ.
ನಾಳೆ ಬುಧವಾರ (ದಿನಾಂಕ : 28-06-2023) ಬೆಳಿಗ್ಗೆ 11 ಘಂಟೆಗೆ ನಗರದ ವೀರಶೈವ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ..!!