ಶರಣಬಸವ ಲಿಂಗನಬಂಡಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಪತ್ರಿಕಾ ದಿನಾಚರಣೆ ಪ್ರಯುಕ್ತ ಕನ್ನಡ ಪತ್ರಿಕೋದ್ಯಮ ಪಿತಾಮಹ ಆಧುನಿಕ ಸರ್ವಜ್ಞ ಡಾ.ಡಿ.ವಿ. ಗುಂಡಪ್ಪನವರ ವೃತ್ತವನ್ನು ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿಂದು ಅನಾವರಣಗೊಳಿಸಲಾಗಿತು..!
ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದ ಗಜೇಂದ್ರಗಡ ಮುಖ್ಯ ರಸ್ತೆ ಹಾಗೂ ಸಂತೆ ಮಾರುಕಟ್ಟೆ ಹಾಗೂ ವಿದ್ಯಾನಗರಕ್ಕೆ ಸಂಪರ್ಕಕ್ಕೆ ಹೊಂದಿರುವ ರಸ್ತೆ ಮಧ್ಯೆ ಶಾಸಕ ದೊಡ್ಡನಗೌಡ ಅವರು ವೃತ್ತ ಅನಾವರಣಗೊಳಿಸಿದರು.
ಪತ್ರಕರ್ತರ ಸಂಘದ ಸದಸ್ಯರುಗಳ ಬಹಳ ದಿನಗಳ ಕನಸಾಗಿದ್ದ ಡಿವಿ ಗುಂಡಪ್ಪನವರ ಹೆಸರಿನ ವೃತ್ತ ಇಂದು ಪತ್ರಿಕಾ ದಿನಾಚರಣೆ ದಿನದಂದು ಸಾಕಾರಗೊಂಡಿತು. ಅಷ್ಟೇ, ಅಲ್ಲದೆ ಆರೋಗ್ಯದ ರಕ್ಷಣೆ ಮಾಡುವ ವೈದ್ಯರು ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಪತ್ರಕರ್ತದ ದಿನ ಒಂದೇ ದಿನ ಕೂಡಿ ಬಂದಿರುವುದು ಈ ದಿನ ವಿಶೇಷವಾಗಿದೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಹಾಗೂ ಹಿರಿಯ ವರದಿಗಾರ ಮುಕೇಶ ನಿಲೋಗಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಮಹೇಶ, ಸಿದ್ಧಯ್ಯ ಗುರುವಿನ, ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಅನಿಲ ಆಲಮೇಲ ಹಿರಿಯ ಪತ್ರಕರ್ತರಾದ ಶ್ಯಾಮೀದ್ ಎನ್., ರವೀಂದ್ರ ಬಾಕಳೆ ಸೇರಿ ಶರಣಬಸವ ನವಲಹಳ್ಳಿ, ಬಸವರಾಜ ಪಲ್ಲೇದ, ಭೀಮನಗೌಡ ಪಾಟೀಲ್ ಮಂಡಮರಿ, ವೆಂಕಟೇಶ್ ಕುಲಕರ್ಣಿ, ಸಂಗಮೇಶ ಸಿಂಗಾಡಿ, ಶರಣಪ್ಪ ಲೈನದ್, ಪರಶಿವಮೂರ್ತಿ ಸೇರಿ ಪತ್ರಿಕಾ ಮಿತ್ರರು ಸಾಕ್ಷಿಯಾದರು.!!