ಕೃಷಿ ಪ್ರಿಯ ನ್ಯೂಸ್ |
ಸಂಗಮೇಶ ಮುಶಿಗೇರಿ
ಕೊಪ್ಪಳ : ಸಾಲ ಮರುಪಾವತಿಸಲಾರದೆ ಮನನೊಂದ ರೈತನೊರ್ವ ನೇಣಿಗೆ ಶರಣಾದ ಘಟನೆ ಶನಿವಾರ ನಡೆದಿದೆ..!
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೋದೂರು ತಾಂಡಾದ ವಿಠ್ಠಪ್ಪ ಗೋವಿಂದಪ್ಪ ಚೌವ್ಹಾಣ (62) ಎಂಬ ಮೃತ ರೈತ. ಮೃತ ರೈತ 3 ಎಕರೆ 20 ಗುಂಟೆ ಜಮೀನು ಹೊಂದಿದ್ದು, ಜಮೀನು ಸಾಗುವಳಿಗಾಗಿ ಸಾಲ ಮಾಡಿ ಟ್ರಾಕ್ಟರ್ ಖರೀದಿಸಿದ್ದ. ಆದರೆ, ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಮಾಡಿದ ಸಾಲ ಮರು ಪಾವತಿಸಲಾಗದೇ ಜಿಗುಪ್ಸೆಗೊಂಡು ಇಂದು ಬೆಳಗ್ಗೆ ಜಮೀನು ಕಡೆ ಹೋಗುವುದಾಗಿ ಹೇಳಿ, ಮರವೊಂದಕ್ಕೆ ನೇಣಿಗೆ ಶರಣಾಗಿದ್ದಾನೆ ಎಂದು ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕುಷ್ಟಗಿ ಪೋಲಿಸರು ತನಿಖೆ ಕೈಗೊಂಡಿದ್ದಾರೆ..!!