ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಹೊರವಲಯ ಗಜೇಂದ್ರಗಡ ಮುಖ್ಯ ರಸ್ತೆ ಬದಿ ಜಾಲಿಕಂಟಿಗಳ ಪೊದೆ ಬಳಿ ಮಲಗಿದ್ದ ವೃದ್ದೆಯನ್ನು ನೂತನ ಪಿಎಸ್’ಐ ಮುದ್ದುರಂಗಸ್ವಾಮಿ ಅವರು ರಕ್ಷಣೆ ಮಾಡಿದ್ದಾರೆ.!
ಗಜೇಂದ್ರಗಡ ರಸ್ತೆ ಕ್ರೈಸ್ತ ದ ಕಿಂಗ್ ಶಾಲೆ ಸಮೀಪ ದಿನಾಂಕ 05-08-2023 ಶನಿವಾರ ದಿನ ಬೆಳಿಗ್ಗೆಯಿಂದ ವೃದ್ದೆ ಜಾಲಿಕಂಟಿಗಳ ಬಳಿ ಮಲಗಿಕೊಂಡಿದ್ದಳು. ಸಂಜೆ ಆರುಗಂಟೆ ವರೆಗೂ ಊಟ ನೀರು ಸೇವಿಸದೆ ಗಾಳಿ ಮಳೆಯಲ್ಲಿ ನಡುಗುತ್ತಾ ನಿಂತಿರುವುದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪಿಎಸ್’ಐ ಮುದ್ದುರಂಗಸ್ವಾಮಿ ಅವರು ವೃದ್ದೆಯನ್ನು ಜಾಲಿಕಂಟಿಗಳಿಂದ ಆಚೆ ಕರೆದು ವಿಚಾರಿಸಿದಾಗ ಕುಷ್ಟಗಿ ತಾಲೂಕಿನ ಬ್ಯಾಲಿಹಾಳ ಗ್ರಾಮದವಳು ಎಂದು ಗುರುತಿಸಿದ್ದಾರೆ. ಬಳಿಕ ವೃದ್ದೆಯನ್ನು ಗ್ರಾಮಕ್ಕೆ ತೆರಳುವ ಗೂಡ್ಸ ಗಾಡಿಯಲ್ಲಿ ಹತ್ತಿಸಿ ಸುರಕ್ಷಿತವಾಗಿ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.!!