ಕುಷ್ಟಗಿ ತಾಲ್ಲೂಕು ವಕೀಲರ ಸಂಘಕ್ಕೆ ಅಧ್ಯಕ್ಷರಾಗಿ ವಿಜಯ ಮಾಂತೇಶ ಆಯ್ಕೆ!

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲ್ಲೂಕು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿಜಯ ಮಾಂತೇಶ್ ಕುಷ್ಟಗಿ ಅವರು 54 ಮತಗಳ ಅಂತರದಿಂದ ಆಯ್ಕೆಯಾದರು.!

ಪಟ್ಟಣದ ನ್ಯಾಯಾಲಯದ ಸಂಕೀರ್ಣ ನ್ಯಾಯವಾದಿಗಳ ಸಂಘದ ಕಾರ್ಯಾಲಯದಲ್ಲಿ ಒಟ್ಟು 203 ಮತದಾನ ಬಲ ಹೊಂದಿರುವ ವಕೀಲರ ಸಂಘಕ್ಕೆ ದಿನಾಂಕ 10-08-2023 ಗುರುವಾರ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಚುನಾವಣೆ ನಡೆಯಿತು. 3 ಮತಗಳು ಅಸಿಂಧು ಆಗಿದ್ದವು. ಒಟ್ಟು 200 ಮತದಾರರು ಅಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನಕ್ಕೆ
ಸ್ಪರ್ಧೆಯೊಡ್ಡಿದ್ದ ವಿಜಯ ಮಹಾಂತೇಶ ಕುಷ್ಟಗಿ ಹಾಗೂ ನಾಗರಾಜ ಕೆ. ಅವರಿಗೆ ಮತದಾನ ಮಾಡಿದರು. ಇಂದು ಸಂಜೆ 5.30ಕ್ಕೆ ನಡೆದ ಮತದಾನ ಎಣಿಕೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿಜಯ ಮಹಾಂತೇಶ ಕುಷ್ಟಗಿ ಅವರು 54 ಮತಗಳ ಅಂತರದಿಂದ ವಿಜಯಶಾಲಿಯಾದರು. ಕಾರ್ಯದರ್ಶಿ ಸ್ಥಾನಕ್ಕೆ ಬಾಲನಗೌಡ ಗೌಡರ ಹಾಗೂ ಬಸವರಾಜ ಲಿಂಗಸೂರು ಇವರ ನಡುವೆ ನಡೆದ ಪೈಪೋಟಿಯಲ್ಲಿ ಬಸವರಾಜ ಲಿಂಗಸೂರು ಅವರು 9 ಮತಗಳ ಅಂತರದಿಂದ ವಿಜಯಶಾಲಿಯಾದರು.

ಉಪಾಧ್ಯಕ್ಷರಾಗಿ, ಶಿವಕುಮಾರ್ ದೊಡ್ಡಮನಿ, ಜಂಟಿ ಕಾರ್ಯದರ್ಶಿಯಾಗಿ ಮೈನೂದ್ದಿನ್ ಮುಲ್ಲಾ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಎಸ್.ಎನ್. ನಾಯಕ, ರಮೇಶ ಪಿ., ಟಿ.ಎಚ್. ಆಡಿನ, ಎಸ್.ಎಂ.ಶೆಟ್ಟರ್ ಘೋಷಿಸಿದರು.

ಈ ವೇಳೆ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಮ್.ಎಚ್.ಗೋಡಿ, ಮಧುಸೂದನ್ ಬನ್ನಿಗೋಳ., ಸಿ.ಪಿ.ಪಾಟೀಲ್, ಎನ್.ಆರ್. ಸೂಡಿ, ಆರ್.ಎಸ್.ಗುರುಮಠ, ಪಕಿರಪ್ಪ ಚಳಗೇರಾ, ಮಹಾಂತೇಶ ಜಾಲಿಹಾಳ, ಸಿ.ಎನ್.ಉಪ್ಪಿನ, ಬಸವರಾಜ ಇದ್ಲಾಪುರ, ಪಿ.ಎನ್ ಸೂಡಿ, ವೆಂಕಟೇಶ್ ಇಳಗೇರ, ಎಸ್.ವೈ.ಬುಕನಟ್ಟಿ ಸೇರಿದಂತೆ ಅನೇಕ ವಕೀಲರು ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯಾದರ್ಶಿಗಳನ್ನು ಗೌರವಿಸಿ ಸಿಹಿ ಹಂಚಿ ಸಂಭ್ರಮ ಆಚರಿಸಿದರು.!!