ಮಹಾಂತೇಶ ಚಕ್ರಸಾಲಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ದಿ ವಿಜಡಮ್ ಶಾಲೆಯ ವಿದ್ಯಾರ್ಥಿಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವ ದಿಸೆಯಲ್ಲಿ “ಶಾಲಾ ಸಂಸತ್ತು’ ಮತದಾನ ಕಾರ್ಯಕ್ರಮ ದಿನಾಂಕ 12-08-2023 ಶನಿವಾರ ನಡೆಯಿತು.!
ಚುನಾವಣೆ ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸಲಾಗಿತು. ತಮ್ಮ ನಾಯಕರನ್ನು ವಿದ್ಯಾರ್ಥಿಗಳು ತಾವೇ ಮತದಾನದ ಮೂಲಕ ಆಯ್ಕೆ ಮಾಡಿಕೊಂಡರು. ಶಾಲೆಯ 1ನೇ ತರಗತಿಯಿಂದ 5ನೇ ತರಗತಿಯವರೆಗೆ 280 ವಿದ್ಯಾಥಿರ್ಗಳು ಮತದಾನದ ಹಕ್ಕು ಚಲಾಯಿಸಿದರು. ಪ್ರಜಾಪ್ರಭುತ್ವದಲ್ಲಿ ಆಡಳಿತ ಹೇಗೆ ನಡೆಸಲಾಗುತ್ತದೆ ಎಂಬುದರ ಮಾದರಿಯಲ್ಲಿ ಶಾಲೆಯಲ್ಲಿ ತಮ್ಮ ನಾಯಕರನ್ನು ಆರಿಸಿದರು.
ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆತ, ಪ್ರಚಾರಕ್ಕೆ ಅವಕಾಶ, ಮತದಾನ, ಫಲಿತಾಂಶ ಘೋಷಣೆ ಹೀಗೆ ಎಲ್ಲ ಹಂತಗಳನ್ನು ಶಾಲಾ ಸಂಸತ್ತಿನ ಚುನಾವಣೆಯಲ್ಲಿ ಅನುಸರಿಸಲಾಯಿತು. ಒಟ್ಟು 9 ಜನ ವಿದ್ಯಾರ್ಥಿಗಳು ಶಾಲಾ ಸಂಸತ್ತಿಗೆ ಆಯ್ಕೆಯಾದರು. ಇದೇ ಆಗಸ್ಟ್ 15 ರಂದು ಸಂಸತ್’ಗೆ ಆಯ್ಕೆಯಾದ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಚುನಾವಣೆ ನಡೆಯುವ ಪೂರ್ವದಲ್ಲಿ ಮತ ಪೆಟ್ಟಿಗೆಯಲ್ಲಿ ಯಾವರೀತಿ ಮತದಾನ ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ
ಶಾಲೆಯ ಕಾರ್ಯದರ್ಶಿ ಶ್ರೀ ಶಂಭು ಹಿರೇಮಠ ಚುನಾವಣೆ ಅಧಿಕಾರಿಯಾಗಿ ಮಾಹಿತಿ ನೀಡಿದರು.