ಹನುಮನಾಳದಲ್ಲಿ ಯುವಕನ ಕೊಲೆ..!

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ: ಜಮೀನೊಂದರಲ್ಲಿ ಯುವಕನೋರ್ವ ಧಾರುಣವಾಗಿ ಕೊಲೆಗೀಡಾದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.!

ಗ್ರಾಮದ 23 ವಯಸ್ಸಿನ ಮಂಜಪ್ಪ ದ್ಯಾಮಣ್ಣ ಚಿಗರಿ ಕೊಲೆಯಾದ ಯುವಕ. ಗ್ರಾಮದ ಹೊರವಲಯ ತಮ್ಮ ಜಮೀನಿನಲ್ಲಿ ಮಲಗಲು ತೆರಳಿದ್ದ ಸಂದರ್ಭದಲ್ಲಿ ಯುವಕನಿಗೆ ಯಾರೋ ದುಷ್ಕರ್ಮಿಗಳು ತಲೆಗೆ ಹಾಗೂ ಹೊಟ್ಟೆಯ ಭಾಗಕ್ಕೆ ಮಾರಕ ಅಸ್ತ್ರಗಳಿಂದ ಹಲ್ಲೆಗೈದು ಕೊಲೆಮಾಡಿರುವುದು ಭಾನುವಾರ ಬೆಳಿಗ್ಗೆ ಗೊತ್ತಾಗಿದೆ. ಆದರೆ, ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಯುವಕನನ್ನು ಕಳೆದುಕೊಂಡ ಕುಟುಂಬಸ್ಥರ ರೋಧನ ಮುಗಿಲುಮುಟ್ಟಿದೆ.

ಈ ಘಟನೆ ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆಗೆ ಕ್ರಮಕೈಗೊಂಡಿದ್ದಾರೆ.!!