ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಚಂದ್ರಗ್ರಹದ ಮೇಲೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ವಿಜ್ಞಾನಿಗಳು ದಿನಾಂಕ 23-08-2023 ಸಂಜೆ 6 ಗಂಟೆಗೆ 4 ನಿಮಿಷಕ್ಕೆ ಭಾರತದ ಚಂದ್ರಯಾನ-3 ವಿಕ್ರಮ ಸಾಫ್ಟ್ ಲ್ಯಾಂಡಿಂಗ್ ಮಾಡಿರುವುದು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿತು.!
ಜಿಲ್ಲೆಯಾದ್ಯಂತ ಚಂದಮಾಮನ ಮುತ್ತಿಕ್ಕಿದ ಚಂದ್ರಯಾನ 3-ವಿಕ್ರಮ್ ಲ್ಯಾಂಡರ್ ಕಣ್ತುಂಬಿಕೊಂಡ ಜನತೆ, ಯುವಕರು ಹಾಗೂ ವಿದ್ಯಾರ್ಥಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಸಿದರು.
ಚಂದ್ರಗ್ರಹದ ದಕ್ಷಿಣ ಕಕ್ಷೆಯಲ್ಲಿ ಚಂದ್ರಯಾನ-3 ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಶ್ವದಲ್ಲೇ ಮೊದಲ ದೇಶವಾಗಿ ಭಾರತ ಹೊರಹೊಮ್ಮಿತು. ಎರಡು ವೈಪಲ್ಯದ ಬಳಿಕವೂ ಪರಿಶ್ರಮ ಪಟ್ಟ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ವಿಜ್ಞಾನಿಗಳ ಸಾಧನೆಗೆ ಜನ ಅಭಿನಂದನೆಗಳ ಸುರಿಮಳೆ ಗೈದರು.
ಕುಷ್ಟಗಿ ಸೇರಿದಂತೆ ಹನುಮನಾಳ ಗ್ರಾಮದಲ್ಲಿ ಹಿರಿಯರು, ಯುವಕರು ಹಾಗೂ ವಿದ್ಯಾರ್ಥಿಗಳು ರಾಷ್ಟ್ರ ಭಾವುಟ ಪ್ರದರ್ಶಿಸಿದರು. ಕಡೇಕೊಪ್ಪ ಗ್ರಾಮದಲ್ಲಿ ಮನೆಯ ಮುಂದೆ ರಂಗೋಲಿಯಲ್ಲಿ ಚಂದ್ರಯಾನ-3 ವಿಕ್ರಂ ಚಿತ್ರ ಬಿಡಿಸಿ ದೇಶಾಭಿಮಾನ ಮೆರೆದರು.
ಈ ಮಹತ್ತರ ದಿನವನ್ನು ಭಾರತವಷ್ಟೇ ಅಲ್ಲದೆ ಇಡೀ ವಿಶ್ವವೇ ಚಂದ್ರಯಾನ-3 ವಿಕ್ರಮ ಸಾಫ್ಟ್ ಲ್ಯಾಂಡಿಂಗ್ ನೇರ ಪ್ರಸಾರವನ್ನು ಖಾತುರದಿಂದ ಮನೆ ಮನೆಗಳಲ್ಲಿ ಟಿವಿ ಹಾಗೂ ಮೊಬೈಲ್, ಜಾಲತಾಣಗಳಲ್ಲಿ ವೀಕ್ಷಣೆ ಮಾಡುವ ಮೂಲಕ ಕಣ್ತುಂಬಿಕೊಂಡರು.
ವಿದ್ಯಾರ್ಥಿಗಳು ಹಾಗೂ ಯುವಕರು ನಮ್ಮ ದೇಶದ ಇಸ್ರೋ ವಿಜ್ಞಾನಿಗಳ ಪರಿಶ್ರಮ, ಸಾಧನೆ ಹಾಗೂ ಹೆಮ್ಮೆಗೆ ಕಾರಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.