ಮಹಾಂತೇಶ ಚಕ್ರಸಾಲಿ
ಕೃಷಿ ಪ್ರಿಯ ನ್ಯೂಸ್ |
ಇಂದು ಭಾರತಕ್ಕೆ ಮತ್ತು ವಿಶೇಷವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಮಹತ್ತರವಾದ ದಿನವಾಗಿದ್ದು, ಭಾರತವಷ್ಟೇ ಅಲ್ಲದೆ ಇಡೀ ವಿಶ್ವವೇ ಚಂದ್ರಯಾನ-3 ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ನೇರ ಪ್ರಸಾರ ವೀಕ್ಷಣೆಗೆ ಕಾತುರದಿಂದ ಕಾಯುತ್ತಿದೆ.!
ಭಾರತದ ಚಂದ್ರಯಾನ – 3 ವಿಶೇಷ ಹಂತವನ್ನು ತಲುಪಲಿದ್ದು, ಇಸ್ರೋ ನಿರ್ಮಿತ ವಿಕ್ರಂ ಚಂದ್ರನ ದಕ್ಷಿಣ ಕಕ್ಷೆಯ ಮೂಲಕ ಮೇಲೆ ಇಂದು ಸಂಜೆ 6.04 ನಿಮಿಷಕ್ಕೆ ಇಳಿಯಲಿದೆ. ಇದರ ನೇರ ಪ್ರಸಾರ ಸಂಜೆ 5.20ರಿಂದಲೇ ಆರಂಭವಾಗಲಿದೆ ಎಂದು ಇಸ್ರೋ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಈ ಕ್ಷಣಗಳನ್ನು ವಿದ್ಯಾರ್ಥಿಗಳು ಕಣ್ತುಂಬಿಕೊಳ್ಳಲು ಕುಷ್ಟಗಿ ತಾಲೂಕಿನ ಕೆಲ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ವಿಜ್ಞಾನ ವಿಷಯ ಬೋಧಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೋಜೆಕ್ಟರ್ ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲದೇ ಇಸ್ರೋದ ಅಧಿಕೃತ ವೆಬ್ಸೈಟ್ ಲಿಂಕ್ ನೀಡಿ ತಮ್ಮ ಪಾಲಕರ ಮೊಬೈಲ್ ಅಥವಾ ಟಿವಿ ಮೂಲಕ ಚಂದ್ರಯಾನ-3 ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ನೇರ ಪ್ರಸಾರ ವೀಕ್ಷಣೆ ಮಾಡುವಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಓದುಗ ದೊರೆಗಳೆ..
ISRO ಅಧಿಕೃತ ವೆಬ್‌ಸೈಟ್‌ನ ಪ್ರಕಾರ, 5 ಗಂಟೆಯಿಂದ ಪ್ರಾರಂಭವಾಗುವ ಚಂದ್ರಯಾನ್-3 ಮಿಷನ್ ಸಾಫ್ಟ್ ಲ್ಯಾಂಡಿಂಗ್ ಅನ್ನು ಪ್ರಸಾರ ಮಾಡುತ್ತಿದ್ದು. IST (5:27 PM). ಭಾರತದ ಚಂದ್ರನಿಗೆ ಐತಿಹಾಸಿಕ ಮಿಷನ್ ಅನ್ನು ಗುರುತಿಸಲು ಸಾಫ್ಟ್ ಲ್ಯಾಂಡಿಂಗ್ ಅನ್ನು ನೀವು ಕಣ್ಣು ತುಂಬಿಕೊಳ್ಳಬಹುದು. ನಿಮ್ಮ ಮೊಬೈಲ್ ನಲ್ಲಿ ಈ www.isro.gov.in ವೆಬ್ಸೈಟ್ ಮೂಲಕ ನೋಡಬಹುದು.
ಚಿತ್ರ ಕೃಪೆ : ಅಂತರ್ಜಾಲ