ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ತಿಗಾಗಿ ಸ್ವತಃ ತಮ್ಮನನ್ನೇ ಕೊಲೆ ಮಾಡಿದ ಅಣ್ಣ ಹಾಗೂ ಮತ್ತೋರ್ವನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.!
ಈ ಕುರಿತು ಮಾಧ್ಯಮಕ್ಕೆ ಇಂದು ಸೋಮವಾರ ರಾತ್ರಿ ಜಿಲ್ಲಾ ಪೊಲೀಸ್ ಇಲಾಖೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಿಷ್ಟು, ಕೊಲೆ ನಡೆದ ಘಟನಾ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಜಿಲ್ಲಾ ವರಿಷ್ಠಾಧಿಕಾರಿ ಯಶೋಧಾ ವಂಟಿಗೋಡಿ ಹಾಗೂ ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಅವರು ಪರಿಶೀಲಿಸಿ ಕೊಲೆ ಪ್ರಕರಣ ಬೇಧಿಸಲು ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ತನಿಖಾಧಿಕಾರಿಗಳನ್ನಾಗಿ ಕುಷ್ಟಗಿ ಸಿಪಿಐ ಯಶವಂತ ಬಿಸನಳ್ಳಿ ಹಾಗೂ ಹನುಮಸಾಗರ ಪಿಎಸ್’ಐ ವಿರುಪಾಕ್ಷಿ ಅವರನ್ನು ನೇಮಿಸಿ ಸಲಹೆ ಸೂಚನೆ ಮಾರ್ಗದರ್ಶನ ನೀಡಿದ್ದರು.
ಮಾರ್ಗದರ್ಶನ ಮೇರೆಗೆ ತನಿಖಾ ತಂಡ ಸಾಕ್ಷ್ಯಾಧಾರಗಳ ಮೇರೆಗೆ ಪರಿಶೀಲನೆ ನಡೆಸಿ, ದಿನಾಂಕ 21-08-2023 ಸೋಮವಾರ ದಿನ ಮೃತ ಯುವಕನ ಸಹೋದರ 24 ವಯಸ್ಸಿನ ರಂಗಪ್ಪ ತಂದೆ ದ್ಯಾಮಣ್ಣ, 20 ವಯಸ್ಸಿನ ರಮೇಶ ತಂದೆ ಶರಣಪ್ಪ ಇವರನ್ನು ಶೋಧಿಸಿ ವಿಚಾರಿಸಿದಾಗ, ಮೃತನ ಅಣ್ಣನಾದ ರಂಗಪ್ಪ ತಂದೆ ದ್ಯಾಮಣ್ಣ ತನ್ನ ಸಹೋದರ ಮದ್ಯ ವ್ಯಸನಿ ಮತ್ತು ಜನರೊಂದಿಗೆ ಜಗಳ ತೆಗೆಯುವುದು ಮಾಡುತಿದ್ದು, ತಮ್ಮಿಬ್ಬರ ನಡುವೆ ಪಿತ್ರಾರ್ಜಿತ ಆಸ್ತಿ 10 ಎಕರೆ ಇದ್ದು, ಅಷ್ಟು ಆಸ್ತಿ ತನಗೇ ಆಗುತ್ತದೆ ಅಂತ ತಿಳಿದು ರಂಗಪ್ಪ ಮತ್ತು ರಮೇಶ ಇಬ್ಬರೂ ಸೇರಿ ಮಂಜುನಾಥನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವುದು ಒಪ್ಪಿಕೊಂಡಿದ್ದಾರೆ.
ಕೊಲೆಯಾದ 24 ಗಂಟೆಯಲ್ಲಿ ಪ್ರಕರಣ ಬೇಧಿಸಿದ ಅಧಿಕಾರಿಗಳು ಹಾಗೂ ತಂಡಕ್ಕೆ ಎಸ್ಪಿ ಯಶೋಧಾ ವಂಟಿಗೋಡಿ ಅವರು ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.!!