ಹೆದ್ದಾರಿಯಲ್ಲಿ ಚಲಿಸುತಿದ್ದ ಲಾರಿಗೆ ಬೆಂಕಿ!

ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಬೆಲೆಬಾಳುವ ಟೊಯೋಟಾ ಕಾರಿನ ಇಂಜಿನ್’ಗಳನ್ನು ಹೇರಿಕೊಂಡು ಚಲಿಸುತ್ತಿದ್ದ ಲಾರಿವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದ ಹೊರವಲಯ ದಿನಾಂಕ 28-08-2023 ಸೋಮವಾರ ಸಂಜೆ ಸಂಭವಿಸಿದೆ.!

ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ಇಳಕಲ್ ರಸ್ತೆ ಪೆಟ್ರೋಲ್ ಬಂಕ್ ಬಳಿ ಈ ಅವಘಡ ನಡೆದಿದೆ. ರಾಜ್ಯದ ಲಾರಿಯೊಂದು ದೆಹಲಿಯಿಂದ ಟೊಯೋಟಾ ಕಾರಿನ ಇಂಜಿನ್’ಗಳನ್ನು ಹೇರಿಕೊಂಡು ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದ ಸಂದರ್ಭದಲ್ಲಿ ಕ್ಯಾಬಿನ್’ಅಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಚ್ಚೆತ್ತ ಚಾಲಕ ಪಾರಾಗಿದ್ದಾನೆ. ಯಾವುದೇ ಜೀವಹಾನಿಯಾಗಿಲ್ಲ ಎಂದು ಮಾಹಿತಿ ನೀಡಿರುವ ಅಗ್ನಿಶಾಮಕ ಠಾಣಾಧಿಕಾರಿ ರಾಜು ನರಸಪ್ಪ ಅವರು, ಬೆಂಕಿ ಅವಘಡದಲ್ಲಿ ಡಿಸೇಲ್ ಟ್ಯಾಂಕರ್ ಸ್ಪೋಟವಾಗುವ ಸಂಭವ ಹೆಚ್ಚಿರುತ್ತದೆ. ಮುಂದೆ ಸಂಭವಿಸಬೇಕಾದ ಅಪಾಯವನ್ನು ತಪ್ಪಿಸಲು ತಮ್ಮನ್ನು ಸೇರಿದಂತೆ ಫಾಯರ್ ಸಿಬ್ಬಂದಿ ಅಶೋಕ, ಚಾಲಕ ಬಸವರಾಜ, ಹುಸೇನಪಾಷ, ಅನೀಲ, ಬಸವರಾಜ ಜೀವದ ಹಂಗು ತೊರೆದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.