12 ಎಕರೆ ಜಮಿನು ಉಳುಮೆ, 80 ಕಿಮೀ ಕ್ರಮಿಸಿ ಸಾಹಸ ಮೆರೆದ ಜೋಡೆತ್ತು!

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ: ಕಡಿಮೆ ಸಮಯದಲ್ಲಿ ಹೆಚ್ಚು ಜಮೀನು ಉಳಿಮೆ ಮಾಡಿ, ಸುಕ್ಷೇತ್ರ ಕೂಡಲಸಂಗಮ ಭೇಟಿ ಕೊಟ್ಟು ರೈತರೊಬ್ಬರ ಜೋಡೆತ್ತು ಸಾಹಸ ಮೆರೆದು ಗಮನಸೆಳೆದ ಪ್ರಸಂಗ ಜಿಲ್ಲೆಯ ಕುಷ್ಟಗಿ ತಾಲೂಕಿನ ಅಂಟರಠಾಣಾ ಗ್ರಾಮದಲ್ಲಿ ಜರುಗಿದೆ.!

ಪ್ರತಿವರ್ಷ ಶ್ರಾವಣ ಮಾಸದ ಪ್ರಯುಕ್ತ ಗ್ರಾಮದ ರೈತಾಪಿ ವರ್ಗ, ತಮ್ಮ ಕಟ್ ಮಸ್ತಾದ ಎತ್ತುಗಳೊಂದಿಗೆ ಬಂಡಿ ಹೂಡಿಕೊಂಡು ಸವದತ್ತಿ ಯಲ್ಲಮ್ಮ ದೇವಸ್ಥಾನ ಅಥವಾ ಬನಶಂಕರಿ ದೇವಸ್ಥಾನಕ್ಕೆ ತೆರಳುತಿದ್ದರು.

ಈ ವರ್ಷ ಗ್ರಾಮದ ರೈತಾಪಿ ವರ್ಗ ತಮ್ಮ ಸಾಕಿದ ಎತ್ತುಗಳ ಮಧ್ಯೆ ವಿಶೇಷವಾಗಿ ಸಾಹಸ ಪ್ರದರ್ಶನ ಏರ್ಪಡಿಸಿತ್ತು. ರೈತ ಬಸವರಾಜ ಹಂಚಿನಾಳ ಎಂಬುವವರ ಜೋಡೆತ್ತು ನಾಲ್ಕು ತಾಸಿನ ಅವಧಿಯಲ್ಲಿ 12 ಎಕರೆ ಜಮೀನು ಉಳುಮೆ ಮಾಡಿದ್ದಲ್ಲದೇ ತಾಲೂಕಿನ ಅಂಟರಠಾಣಾದಿಂದ ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲಸಂಗಮಕ್ಕೆ ಹೋಗಿ ಹಿಂತಿರುಗಲು ಸುಮಾರು 80 ಕಿ.ಮೀ. ಬೇಕಾಗುತ್ತದೆ. ಆದರೆ, ಕೇವಲ 4.5 ನಿಮಿಷದಲ್ಲಿ ಜೋಡೆತ್ತು ಪುಟ್ಟಿ ಬಂಡಿಯೊಂದಿಗೆ ಕೂಡಲಸಂಗಮ ಭೇಟಿ ಕೊಟ್ಟು ಸ್ವಗ್ರಾಮಕ್ಕೆ ಹಿಂತಿರುಗಿ ಗ್ರಾಮ ಮಟ್ಟದಲ್ಲಿ ದಾಖಲೆ ಬರೆದಿವೆ.

ಎತ್ತುಗಳ ಸಾಹಸ ಕಣ್ತುಂಬಿಕೊಂಡ ಗ್ರಾಮಸ್ಥರು, ಎತ್ತುಗಳ ಸ್ಪರ್ಧೆಯನ್ನು ವೀಕ್ಷಿಸಿ ಸಂಭ್ರಮಿಸಿದರು.

ಈ ವೇಳೆ ಪ್ರಮುಖರಾದ ಮುತ್ತು ಸಂಕಣ್ಣವರ್, ಸಂಗಣ್ಣ ನಾಗನಗೌಡ್ರು, ಮಂಜು ಪಟ್ಟಣಶೆಟ್ಟಿ, ಬಸವರಾಜ್ ಐಹೋಳ್ಳಿ, ನವೀನ ಜೂಗೇರಿ, ಪರಶು ವಾಲಿಕಾರ್, ಬಸವರಾಜ ಮುದ್ದನ್ನವರ, ಸಂಗಣ್ಣ ದೇಶೆಟ್ಟಿಯವರು ಗ್ರಾಮದ ರೈತ ಬಸವರಾಜ ಹಂಚಿನಾಳ ಮತ್ತು ಅವರ ಸಹಾಸಿ ಜೋಡೆತ್ತುಗಳ ಸಾಹಸಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಗೌರವಿಸಿದ್ದಾರೆ.