ಶರಣು ಚೆನ್ನದಾಸರ
ಕೃಷಿ ಪ್ರಿಯ ನ್ಯೂಸ್ |
ಕುಷ್ಟಗಿ ಪಟ್ಟಣದ 1ನೇ ವಾರ್ಡ ಷರೀಫ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯನ್ನು ಬುಧವಾರ ರಚಿಸಲಾಯಿತು.
ಈ ಕುರಿತು ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಸರ್ವರ ಸಮ್ಮತಿ ಮೇರೆಗೆ ಅಧ್ಯಕ್ಷರನ್ನಾಗಿ ಮಹಬೂಬಸಾಬ ಹಾವಾಡಿಗ ಹಾಗೂ ಉಪಾಧ್ಯಕ್ಷರನ್ನಾಗಿ ಹನುಮವ್ವ ಗಂ. ಮಾರುತೆಪ್ಪ ಸುಡುಗಾಡು ಸಿದ್ದರು ಅವರನ್ನು ಆಯ್ಕೆ ಮಾಡಲಾಯಿತು. ಸನ್ಮಾನ ಸ್ವೀಕರಿಸಿದ ನೂತನ ಅಧ್ಯಕ್ಷ ಮಹಿಬೂಬಸಾಬ ಹಾವಾಡಿಗ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಶಾಲಾಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಡಲಾಗುವುದು ಎಂದರು.
ವಾರ್ಡ್ ಸದಸ್ಯೆ ಗೀತಾ ಮಹೇಶ ಕೊಳೂರು ಅವರ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಸರ್ವ ಸದಸ್ಯರು, ಮುಖ್ಯಶಿಕ್ಷಕಿ ಅಮೃತ ಆರ್. ಹಾಗೂ ಸಹಶಿಕ್ಷಕರು, ಪುರಸಭೆ ಮಾಜಿ ಸದಸ್ಯ ಮಹೇಶ ಕೋಳೂರು, ಆರಕ್ಷಕ ಸಿಬ್ಬಂದಿ ಸಾವಿತ್ರಿ ಸೇರಿದಂತೆ ವಾರ್ಡಿನ ನಿವಾಸಿಗಳು ಹಾಗೂ ಶಾಲಾ ಸಿಬ್ಬಂದಿ ಇದ್ದರು.