ಶತಾಯುಷಿ ಮತದಾರರಿಗೆ ಸನ್ಮಾನ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : ಅಂತರರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಭಾನುವಾರ ತಾಲ್ಲೂಕು ಆಡಳಿತದ ವತಿಯಿಂದ ತಾಲ್ಲೂಕಿನ 100 ವರ್ಷ ಪೂರೈಸಿದ 2 ಹಿರಿಯ ಶತಾಯುಷಿ ಮತದಾರರನ್ನು ಗುರುತಿಸಿ ಸನ್ಮಾನಿಸಲಾಯಿತು.

ತಾಲೂಕಿನ ತಾವರಗೇರಾ ಪಟ್ಟಣದ ಶತಾಯುಷಿ ಹಿರಿಯ ಮತದಾರರಾದ ಕಂಟೆಮ್ಮ ಗಂಡ ಕರಡೆಪ್ಪ ಅವರ ಮನೆಗೆ ಚುನಾವಣಾ ಆಯೋಗದ ಅಜಿತ್ ಜೋಷಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಬಿಸಾಬ ಖುದಾನ್ನವರ ಹಾಗೂ ಸಿಬ್ಬಂದಿ ವರ್ಗ ಶಾಲು ಹೊದಿಸಿ, ಫಲ ಪುಷ್ಪ ಸಮರ್ಪಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದರು.

ಅದೇರೀತಿ ತಾಲೂಕಿನ ಚಳಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಾಲಬಂಡಿ ಗ್ರಾಮದ ಶತಾಯುಷಿ ಹನುಮವ್ವ ಶಿವಪ್ಪ ಹರಿಜನ ಅವರ ಮನೆಗೆ ತೆರಳಿ ಶಾಲು ಹೊದಿಸಿ ಫಲ ಪುಷ್ಪ ಸಮರ್ಪಿಸಿ ಅಭಿನಂದನಾ ಪತ್ರ ನೀಡಿದರು.

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶರಣಮ್ಮ ಚಂದಾಲಿಂಗಪ್ಪ, ತಾಲೂಕು ಪಂಚಾಯಿತಿ ಇಒ ನಿಂಗಪ್ಪ ಎಸ್.ಎಂ. ಹಾಗೂ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಹನುಮಂತ ಗೌಡ ಪೊಲೀಸ್ ಪಾಟೀಲ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ಸಂಕನಾಳ, ಅಮೀನ್, ಮುತ್ತಣ್ಣ, ಉಪಾಧ್ಯಕ್ಷ ನಿಂಬವ್ವ ಕತ್ತಿ, ಗ್ರಾಪಂ ಸದಸ್ಯರಾದ ಬಸವಂತಪ್ಪ, ಮೂರ್ತುಜಾ ಸಾಬ್, ಹುಸೇನ್ ಗೌಡ, ಐ ಇ ಸಿ ಸಂಯೋಜಕ ಚಂದ್ರಶೇಖರ್ ಹಾಗೂ ಗ್ರಾಮಸ್ಥರು ಇದ್ದರು.