ತ್ರೈಮಾಸಿಕ ಪರಿಶೀಲನಾ ಕೆಡಿಪಿ ಸಮಿತಿಗೆ 6 ಮಂದಿ ಸದಸ್ಯರಾಗಿ ನಾಮನಿರ್ದೇಶನ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಕೆಡಿಪಿ ಸಮಿತಿಗೆ ಆರು ಮಂದಿ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.

ಸಾಮಾನ್ಯ ವರ್ಗಕ್ಕೆ ತಾಲೂಕಿನ ಹಿರೇಗೊಣ್ಣಾಗರದ ಶ್ಯಾಮರಾವ ರಾಘವೇಂದ್ರ ಕುಲಕರ್ಣಿ, ತಳುವಗೇರಾದ ಸಿದ್ದನಗೌಡ ದೊಡ್ಡನಗೌಡ ಪಾಟೀಲ್, ಹಿಂದುಳಿದ ವರ್ಗದ ನರಸಾಪೂರಿನ ಯಲ್ಲಪ್ಪ ಲಕ್ಷ್ಮಪ್ಪ ಬಾಗಲಿ, ಅಲ್ಪಸಂಖ್ಯಾತ ವರ್ಗದ ಕುಷ್ಟಗಿ ಪಟ್ಟಣದ ಸೈಯದ್ ಅನ್ವರ್ ಅತ್ತಾರ, ಪರಿಷಳಶಿಷ್ಟ ಪಂಗಡದಿಂದ ಇದ್ಲಾಪೂರದ ಹನುಮಗೌಡ ಸೋಮನಗೌಡ ಪಾಟೀಲ್ ಹಾಗೂ ಮಹಿಳಾ ಕ್ಷೇತ್ರದಿಂದ ಹೂಲಗೇರಾದ ನಿರ್ಮಲಾ ಮಹಾಂತೇಶ ಕರಡಿ ಇವರುಗಳನ್ನು ರಾಜ್ಯಪಾಲರ ಆಜ್ಞಾನುಸಾರ ಅವರ ಹೆಸರಿನಲ್ಲಿ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖಿಕ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿನಾಥ ಅವರು ಕುಷ್ಟಗಿ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಕೆಡಿಪಿ ಸಮಿತಿಗೆ ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಲಾಗಿದೆ ಎಂದು ದಿನಾಂಕ 30-09-2023 ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.