ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಜಾಲಿಹಾಳ ಗ್ರಾಮದ ಹೊರ ವಲಯ ಸೆ.24 ಭಾನುವಾರ ತಡರಾತ್ರಿ ಯುವಕನೋರ್ವನನ್ನು ಮಾರಕಾಸ್ತ್ರದಿಂದ ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಕುಷ್ಟಗಿ ಪಟ್ಟಣದಲ್ಲಿ ಶನಿವಾರ ಎಸ್ಪಿ ಯಶೋಧಾ ವಂಟಿಗೋಡಿ ಅವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೊಲೆಯಾದ ಯುವಕ ಜಾಲಿಹಾಳ ಗ್ರಾಮದ 30 ವಯಸ್ಸಿನ ಭಾಗಪ್ಪ ತಂ. ಹನುಮಪ್ಪ ಕ್ಯಾದಿಗುಪ್ಪಿ ಈತನನ್ನು ಜಾಲಿಹಾಳ-ಶಿರಗುಂಪಿ ರಸ್ತೆ ಬದಿ ಕುತ್ತಿಗೆ ಕೊಯ್ದು ಕೊಚ್ಚಿ ಯಾರೋ ಅಪರಿಚಿತರು ಕೊಲೆ ಮಾಡಿದ ಘಟನೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಸ್ಥಳ ಪರಿಶೀಲನೆ ನಡೆಸಿದ್ದ ಎಸ್ಪಿ ಯಶೋಧಾ ವಂಟಿಗೋಡಿ, ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಅವರು ಕೊಲೆ ತನಿಖೆ ಪತ್ತೆಗಾಗಿ ತನಿಖಾ ತಂಡ ರಚಿಸಿ ಸಲಹೆ ಸೂಚನೆ ಮಾರ್ಗದರ್ಶನ ನೀಡಿದ್ದರು. ಕುಷ್ಟಗಿ ಸಿಪಿಐ ಯಶವಂತ ಬಿಸನಹಳ್ಳಿ, ಪಿಎಸ್’ಐ ಮಃದ್ದುರಂಗಸ್ವಾಮಿ ನೇತೃತ್ವದಲ್ಲಿ ಎಎಸೈ ದುರುಗಪ್ಪ, ಹನುಮಸಾಗರ ಎಎಸೈ ವಸಂತ, ಹೆಡ್ ಕಾನ್ಸಟೇಬಲ್’ಗಳಾದ ಶ್ರೀಧರ, ಪರಶುರಾಮ, ಅಮರೇಶ ಹುಬ್ಬಳ್ಳಿ, ಪೊಲೀಸ್ ಸಿಬ್ಬಂದಿ ಪ್ರಶಾಂತ, ಹನುಮಂತ, ಮಾಸಪ್ಪ ಹಾಗೂ ಸಿಡಿಆರ್ ಸೆಲ್ ಸಿಬ್ಬಂದಿ ಕೋಟೇಶ, ಮಂಜುನಾಥ, ಪ್ರಸಾದ ಇವರುಗಳ ತಂಡ ತ್ವರಿತವಾಗಿ ತನಿಖೆ ಕೈಗೊಂಡು ಸಾಕ್ಷಾಧಾರಗಳ ಮೇರೆಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಇಂದು ಶನಿವಾರ ದಿನ ಜಾಲಿಹಾಳ ಗ್ರಾಮದ ಆರೋಪಿತರಾದ ಸಂತೋಷ ಸಿದ್ದಪ್ಪ ಗೋತಗಿ, ದುರುಗಪ್ಪ ಹನುಮಂತ ಪ್ರಜಾರಿ ಇವರುಗಳನ್ನು ಪತ್ತೆ ಮೋಡಿ ವಿಚಾರಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.
ಕೊಲೆಯಾದ ಯುವಕ ಭಾಗಪ್ಪ ಕುಡಿದ ನಿಷೆಯಲ್ಲಿ
ಕಳೆದ ಎರಡು ತಿಂಗಳಿನಿಂದ ಕೊಲೆ ಓರೋಪಿ ಸಂತೋಷನ ತಾಯಿ ಮತ್ತು ಸಹೋದರಿಯನ್ನು ತನ್ನ ಬಳಿ ಕಳುಹಿಸುವಂತೆ ಕಿರುಕುಳ ಹಾಗೂ ಆತನ ಪ್ರೇಯಸಿಗೆ ಮೊಬೈಲ್ ಸಂದೇಶ ರವಾನಿಸಿದ್ದರಿಂದ ಧ್ವೇಷ ಬೆಳೆದು ಕೊಲೆ ಮಾಡಿರುವುದಾಗಿ ಕಾರಣ ನೀಡಿದ್ದಾರೆ ಎಂದು ಎಸ್ಪಿ ಯಶೋಧಾ ವಂಟಿಗೋಡಿ ಅವರು ಮಾಹಿತಿ ನೀಡಿದರು. ಕೊಲೆಯಾದ ನಾಲ್ಕು ದಿನಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸ್ ಅಧಿಕಾರಿಗಳ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಎಸ್ಪಿ, ಬಹುಮಾನ ಘೋಷಣೆ ಮಾಡಿದ್ದಾರೆ.