ಸಾವಿನಲ್ಲೂ ಒಂದಾದ ವೃದ್ಧ ದಂಪತಿ..!

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ರಾತ್ರಿ ಪತಿ ನಿಧನ ಹೊಂದಿದ ಬೆನ್ನಲ್ಲೇ ಬೆಳಗಿನ ಜಾವ ಪತ್ನಿಯು ಸಾವಿನಲ್ಲಿ ಒಂದಾದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಮಂಗಳವಾರ ಸಂಭವಿಸಿದೆ.

ಮೃತರು ಪಟ್ಟಣದ ಬುತ್ತಿಬಸವೇಶ್ವರ ನಗರದ ನಿವಾಸಿ ಹಾಲುಮತ ಸಮಾಜದ ಹಿರಿಯ ಜೀವಿ ನಿವೃತ್ತ ಮುಖ್ಯೋಪಾಧ್ಯಾಯ ಹನುಮಂತಪ್ಪ ಮೇಟಿ (81), ಶ್ರೀಮತಿ ಗೌರಮ್ಮ ಗಂಡ ಹನುಮಂತಪ್ಪ ಮೇಟಿ (65) ಸಾವಿನಲ್ಲೂ ಒಂದಾದ ಜೋಡಿ. ಮೃತರಿಗೆ ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಮಂಗಳವಾರ ಮದ್ಯಾಹ್ನ 1:00 ಗಂಟೆಗೆ ಸ್ವಗ್ರಾಮ ಹಿರೇಅರಳಹಳ್ಳಿಯ ತಮ್ಮ ಜಮೀನಿನಲ್ಲಿ ನೆರವೇರಿಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.