ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿ ಬಡ ರೋಗಿಗಳೊಂದಿಗೆ ಅಸಭ್ಯ ವರ್ತನೆ ಹಾಗೂ ಹಣಕ್ಕಾಗಿ ಕಿರುಕುಳ ನೀಡುತ್ತಿರುವ ಕುರಿತು ಮೇಲಧಿಕಾರಿಗಳಿಗೆ ಸಾರ್ವಜನಿಕರು ದೂರು ಸಲ್ಲಿಸಿದ್ದಾರೆ.
ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳೊಂದಿಗೆ ಕೆಲ ಆರೋಗ್ಯ ಸಿಬ್ಬಂದಿಯ ಚೆಲ್ಲಾಟ ಹೆಚ್ಚಾಗಿದೆ. ಬಡರೋಗಿಗಳಿಂದ ಹಣ ದೋಚುವ ವ್ಯವಸ್ಥೆ ನಿತ್ಯ ನಡೆಯುತ್ತಿದೆ. ಈ ಬಗ್ಗೆ ಆಸ್ಪತ್ರೆಯ ವೈದ್ಯರ ಸಹಕಾರವಿದೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕಿದ್ದರೂ ಮೌನವಹಿಸಿರುವುದು ಶೋಚನೀಯ.
ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಕುಷ್ಟಗಿ ತಾಲೂಕಿನ ಹನುಮಸಾಗರ ಭಾಗದ ನಿವೇದಿತಾ ಗಂಡ ಮಂಜುನಾಥ್ ಹಡಪದ ಎಂಬ ಬಡ ಕುಟುಂಬದ ಗರ್ಭಿಣಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿ ಸೀಜರಿನ್ ಹೆರಿಗೆಯಾಗಿದೆ. ಆದರೆ, ಇವರ ಆರೋಗ್ಯ ನೋಡುತ್ತಿದ್ದ ಶೈಲಜಾ ಗೋಣಿ ಹಾಗೂ ಭೀಮಾ ಎಂಬುವ ಆರೋಗ್ಯ ಸಿಬ್ಬಂದಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಆರೋಗ್ಯದಲ್ಲಿ ಏರುಪೇರಾದಾಗ ಬಾಣಂತಿ ಶೈಲಜಾಳ ಕುಟುಂಬದವರಿಗೆ ಕೆಟ್ಟ ಪದಗಳಿಂದ ನಿಂದಿಸಿ ಕಳಿಸಿದ್ದಾರೆ. ಆದರೆ ಬಾಣಂತಿ ಆರೈಕೆಗೆ ಮುಂದಾಗಲಿಲ್ಲ. ಈ ವರ್ತನೆ ಬಗ್ಗೆ ನೊಂದು ಆಸ್ಪತ್ರೆಯ ವೈದ್ಯಾಧಿಕಾರಿ ಬಳಿ ದೂರಿದರೂ ಅವರು ಸಹ ನರ್ಸ್ ಶೈಲಜಾ ಅವರ ಪರ ಮಾತನಾಡಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ಮಾತುಗಳನ್ನಾಡಿದ್ದಾರೆ. ಒಬ್ಬ ರೋಗಿಯ ಸ್ಥಿತಿ ಹೀಗಿದ್ದು, ನಿತ್ಯ ಬರುವ ಬಡ ರೋಗಿಗಳ ಪಾಡೇನು? ಒಟ್ಟಾರೆ, ಬಡ ರೋಗಿಗಳ ಬಳಿ ಹಗುರವಾಗಿ ಮಾತನಾಡುವುದಲ್ಲದೇ ಹಣ ಪಡೆಯುವ ನರ್ಸ್ ಶೈಲಜಾ ಗೋಣಿ ಮತ್ತು ಭೀಮಾ ಅವರನ್ನು ಸೇವೆಯಿಂದ ವಜಾಗೊಳಿಸಬೇಕು.
ಜೊತೆಗೆ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಹಾಗೂ ಸೇವೆಯನ್ನು ಸರಿಪಡಿಸಿ ಬಡವರಿಗೆ ಉತ್ತಮ ಸೇವೆ ನೀಡುವ ವ್ಯವಸ್ಥೆ ಜಾರಿಗೆ ತರಲು ಕ್ರಮಕೈಗೊಳ್ಳಬೇಕು ಎಂದು ಈ ಕುರಿತು ಸಮಾಜ ಸೇವಕ ನೀಲಕಂಠಬಾಬು ಎಸ್. ನಿಲೋಗಲ್ ಹಾಗೂ ನೊಂದ ಬಾಣಂತಿ ನಿವೇದಿತಾಳ ಪತಿ ಮಂಜುನಾಥ ಹಡಪದ ಅವರು, ಜಿ.ಪಂ. ಸಿಇಓ ಹಾಗೂ ಡಿಸಿ ಮತ್ತು ಆರೋಗ್ಯ ಇಲಾಖೆ ಆಯುಕ್ತರಿಗೆ ದೂರು ಸಲ್ಲಿಸಿರುವುದಾಗಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಈ ವಿಷಯ ಕುರಿತು ತಮ್ಮ ಗಮನಕ್ಕಿದ್ದು, ವಿಚಾರಣೆ ಮಾಡುತ್ತೇನೆ ಎಂದು ಹೆರಿಗೆಯಾದ ಮಹಿಳೆಯ ಕುಟುಂಬ ಸದಸ್ಯನಿಗೆ ತಿಳಿಸಲಾಗಿತ್ತು. ಆದರೆ, ನಿನ್ನೆದಿನ ಆಸ್ಪತ್ರೆಯಲ್ಲಿರದೇ ಪೇಸೆಂಟ್ ಕರೆದೊಯ್ದಿದ್ದರು. ಆರೋಗ್ಯ ಸಿಬ್ಬಂದಿ ಶೈಲಜಾ ಗೋಣಿ ಅವರನ್ನು ವಿಚಾರಿಸಿದಾಗ ಸಿಜರೀಯನ ಆದ ಮಹಿಳೆ ಅಥವ ಕುಟುಂಬಸ್ಥರಿಗೆ ಅಸಭ್ಯವಾಗಿ ಮಾತನಾಡಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.
ತಜ್ಞವೈದ್ಯ ಡಾ.ಕೆ.ಎಸ್.ರೆಡ್ಡಿ
ಆಡಳಿತಾಧಿಕಾರಿ, ಸಾರ್ವಜನಿಕ ಆಸ್ಪತ್ರೆ ಕುಷ್ಟಗಿ.