ಡಾ. B.R. ಅಂಬೇಡ್ಕರ್ ಫೆಲೋಷಿಪ್ 2023 ರಾಷ್ಟ್ರೀಯ ಪ್ರಶಸ್ತಿಗೆ ಮರಿಯಪ್ಪ ಪೂಜಾರಿ ಭಾಜನ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ಕೊಡಮಾಡುವ ಡಾ. ಬಿ.ಆರ್. ಅಂಬೇಡ್ಕರ್ ಫೆಲೋಷಿಪ್ 2023 ರಾಷ್ಟ್ರೀಯ ಪ್ರಶಸ್ತಿಗೆ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ನ್ಯಾಯವಾದಿ ಮರಿಯಪ್ಪ ರಾಮಪ್ಪ ಪೂಜಾರಿ ಅವರು ಭಾಜನರಾಗಿದ್ದಾರೆ.

2023 ಡಿಸೆಂಬರ್ 11 ರಂದು ನವದೇಹಲಿಯಲ್ಲಿ ನಡೆಯುವ 39ನೇ ವರ್ಷದ ರಾಷ್ಟ್ರೀಯ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರೀಯ ಅಧ್ಯಕ್ಷ ಎಸ್. ಪಿ. ಸುಮನಾಕ್ಷರ್ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಮರಿಯಪ್ಪ ರಾಮಪ್ಪ ಪೂಜಾರಿ ಅವರ ಕಾನೂನು ಸೇವೆ ಮತ್ತು ಸಮಾಜಸೇವೆಗೆ ಈ ಪ್ರಶಸ್ತಿ ಅರಸಿ ಬಂದಿದೆ. ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವ ನ್ಯಾಯವಾದಿ ಮರಿಯಪ್ಪ ಪೂಜಾರಿ ಅವರಿಗೆ ದಲಿತ ಸಂಘಟನೆಗಳು ಮತ್ತು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.