ನದಾಫ್ ಪಿಂಜಾರ ಸಂಘದ ತಾಲೂಕಾಧ್ಯಕ್ಷರಾಗಿ ಮೆಹಬೂಬ ಸಾಬ್ ನೆರೆಬೆಂಚಿ ಆಯ್ಕೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಾ ಪಿಂಜಾರ ಸಂಘದ ನೂತನ ತಾಲೂಕಾಧ್ಯಕ್ಷರಾಗಿ ಮೆಹಬೂಬ ಸಾಬ್ ವಾಯ್. ನೆರೆಬೆಂಚಿ ಅವರು ಆಯ್ಕೆಯಾಗಿದ್ದಾರೆ.

ಈ ಕುರಿತು ಪಟ್ಟಣದ ಶಾಖಾಪೂರ ರಸ್ತೆಯ ಬಳಿ ಇರುವ ಖುಶ್ಬು ಪಾಲಿ ಕ್ಲಿನಿಕ್ ಸಭಾಂಗಣದಲ್ಲಿ ಭಾನುವಾರ ಸಮಾಜದ ಸರ್ವ ಸದಸ್ಯರು ಸಭೆ ಸೇರಿ ತಾಲೂಕಿನ ನದಾಫ್ ಪಿಂಜಾರ ಸಂಘದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸೇರಿದಂತೆ ನೂತನ ಪದಾಧಿಕಾರಿಗಳನ್ನು ಚುನಾವಣೆ ನಡೆಸುವ ಮೂಲಕ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಯಮನೂರು ಸಾಬ್ ನೂರ ಸಾಬ್ ಕಡೆಮನಿ, ಹುಸೇನ್ ಸಾಬ್ ಬುಡ್ನೇಸಾಬ್ ಹನುಮಸಾಗರ, ಫಕೀರ ಸಾಬ್ ಚಂದು ಸಾಬ್ ನದಾಫ್, ಸೈನಾಜ್ ಬೇಗಂ ಮೆಹಬೂಬ್ ಸಾಬ್ ಕಲೆಗಾರ, ಕಾರ್ಯದರ್ಶಿಯಾಗಿ ಯಮನೂರು ಸಾಬ್ ಲಾಲ್ ಸಾಬ್ ನದಾಫ್, ಸಹಕಾರದರ್ಶಿಯಾಗಿ ಇಮಾಮ್ ಸಾಬ್ ಕೆರೆಹಳ್ಳಿ, ಕೋಶಾಧ್ಯಕ್ಷರಾಗಿ ಮೊಹಮ್ಮದ್ ಪಾಷಾ ನಾಗುರು, ಸಂಘಟನಾ ಕಾರ್ಯದರ್ಶಿಯಾಗಿ ಅಲ್ಲಾಭಕ್ಷಿ ಅಮೀನ್ ಸಾಬ್ ನದಾಫ್, ಮೋದಿನ ಸಾಬ್ ಖಾದರ್ ಭಾಷಾ ನದಾಫ್, ಹಸನ್ ಸಾಬ್ ಇಮಾಮ್ ಸಾಬ್ ದೊಡ್ಮನಿ, ಹಾಜಾಬೀ ಯಮನೂರಸಾಬ್ ನದಾಫ್, ಜಿಲ್ಲಾಸದಸ್ಯರಾಗಿ ಬಾಲೆ ಸಾಬ್ ಬುಡ್ನೇಸಾಬ್ ನದಾಫ್, ದಾವಲ್ ಸಾಬ್ ಹುಸೇನ್ ಸಾಬ್ ಕೆರೆಹೊಲ, ಹುಸೇನ್ ಸಾಬ್ ಯಮನೂರ ಸಾಬ್ ನದಾಫ್, ದಾವಲಸಾಬ್ ಕೆರೆಹೊಲ, ಶಹಾಬುದ್ದೀನ್ ತಿಮ್ಮಾಪುರ, ಗರೀಮಸಾಬ್ ಇಲಕಲ್, ಅಮೀನ್ ಸಾಬ್ ನದಾಫ್, ವಾಜಿದ ಬೇಗಂ ದೊಡ್ಮನಿ, ಜುಬೇದ ಬೇಗಮ್ ಸೇನಾಜ್ ಬೇಗಂ ಆಯ್ಕೆಯಾದರು.

ತಾಲೂಕಾಧ್ಯಕ್ಷರಾಗಿ ಆಯ್ಕೆಯಾದ ಉದ್ಯಮಿ ಮೆಹಬೂಬಸಾಬ್ ವಾಯ್ ನೆರಬೆಂಚಿ ಅವರು ಮಾತನಾಡಿ, ಸಮಾಜವನ್ನು ಉತ್ತಮ ರೀತಿಯಲ್ಲಿ ಸಂಘಟಿಸುವುದರ ಮೂಲಕ ಸಮಾಜದ ಏಳಿಗೆಗೆ ಶ್ರಮಿಸೋಣ ಹಾಗೂ ಸಮಾಜದ ಸಬಲೀಕರಣವು ಉತ್ತಮ ಸಂಘಟನೆ ಹಾಗೂ ಶಿಕ್ಷಣದಿಂದ ಮಾತ್ರ ಸಾಧ್ಯ. ಸಹೋದರ ಸಮಾಜಗಳ ಜೊತೆ ಉತ್ತಮ ಬಾಂಧವ್ಯ ಹಾಗೂ ಸಹಕಾರ ತತ್ವದಡಿಯಲ್ಲಿ ಸಾಗಿ ಸಮಾಜವನ್ನು ಬಲಪಡಿಸೋಣ ಎಂದರು.

ಈ ವೇಳೆ ಚುನಾವಣೆಯ ಸಲಹೆಗಾರರಾಗಿ ರಾಜ್ಯ ಸಹ ಕಾರ್ಯದರ್ಶಿ ಶಹಬುದ್ದೀನ್ ಸಾಬ್ ನೂರ್ ಬಾಷಾ. ಚುನಾವಣಾಧಿಕಾರಿ ಚಂದುಸಾಬ್ ನದಾಫ್, ಹೈದಾರಲಿ ಜಾಲಿಹಾಳ್ ವಿಕ್ಷಕರಾಗಿ ಪಾಲ್ಗೊಂಡಿದ್ದರು. ಸಮಾಜದ ಗುರು ಹಿರಿಯರು ನಾಗರೀಕ ಬಂಧುಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.