ಶರಣು ಲಿಂಗನಬಂಡಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ: ಅನಾರೋಗ್ಯ ಕಾರಣದಿಂದ ಬೆಲೆಬಾಳುವ ಗರ್ಭಿಣಿ ಸೂಜಿ ಆಕಳೊಂದು ಅಸುನೀಗಿದ ಘಟನೆ ಪಟ್ಟಣದ ಹೊರವಲಯ ಜಮೀನಿನಲ್ಲಿ ಗುರುವಾರ ರಾತ್ರಿ ನಡೆದಿದೆ.
ಪಟ್ಟಣದ ರೈತ ಚಂದಪ್ಪ ಹುಲ್ಲಪ್ಪ ಕುರಿ ಎಂಬುವರಿಗೆ ಸೇರಿದ ಆಕಳು ಇದಾಗಿದೆ. ಹಳೇ ನೆರೆಬೆಂಚಿ ರಸ್ತೆ ಬಳಿಯ ತಮ್ಮ ಜಮೀನಿನಲ್ಲಿ ಆಕಳನ್ನು ಸಲುಹಿದ್ದ ರೈತ, ಹಾಲುಮಾರಿ ಬಂದಂತಹ ಹಣದಿಂದ ಕುಟುಂಬ ನಿರ್ವಹಣೆ ಮಾಡುತಿದ್ದ. ತುಂಬು ಗರ್ಭಿಣಿಯಿಗಿದ್ದ ಆಕಳು ಅನಾರೋಗ್ಯಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದೆ. ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಸೂಜಿ ಆಕಳನ್ನು ಕಳೆದುಕೊಂಡು
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತ ಪರಿಹಾರಕ್ಕಾಗಿ ಸರ್ಕಾರಕ್ಕೆ ಅಂಗಲಾಚಿದ್ದಾನೆ.