ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ತುಗ್ಗಲಡೋಣಿ ಗ್ರಾಮದ ಗ್ರಾಮ ಪಂಚಾಯಿತಿ ಕೂಲಿಕಾರ್ಮಿಕ ಕಾಣೆಯಾಗಿರುವ ಕುರಿತು ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಡಿ.11 ಸೋಮವಾರ ಪ್ರಕರಣ ದಾಖಲಾಗಿದೆ.
ಮುತ್ತಪ್ಪ ತಂದೆ ಕಳಕಪ್ಪ ಹುಣಸಿಮರದ (23) ಕಾಣೆಯಾದ ಯುವಕ. ನವೆಂಬರ್ 10 ರಂದು ಮನೆಯಿಂದ ಗ್ರಾಮ ಪಂಚಾಯಿತಿ ಕೆಲಸಕ್ಕೆ ಹೋಗಿಬಂದವನು ನಾಪತ್ತೆಯಾಗಿದ್ದಾನೆ. ಫೋನ್ ಕರೆ ಮಾಡಿದಾಗ ಸ್ವಿಚ್ಚಾಫ್ ಆಗಿದೆ. ಸ್ವಗ್ರಾಮ ಸೇರಿದಂತೆ ಮಿಟ್ಟಲಕೋಡ, ಹನುಮನಾಳ, ಗುಡೂರು, ಜಮಖಂಡಿ, ನಿಲೋಗಲ್ ಗ್ರಾಮಗಳಲ್ಲಿ ಹುಡುಕಾಡಲಾಗಿದ್ದು, ಪತ್ತೆಯಾಗದ ಹಿನ್ನೆಲೆ ಮಗನನ್ನು ಪತ್ತೆ ಮಾಡುವಂತೆ ಕೋರಿ ತಾಯಿ ಶರಣವ್ವ ಕಳಕಪ್ಪ ಹುಣಸಿಮರದ ಎಂಬುವರು ನೀಡಿದ ದೂರಿನಲ್ಲಿ ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.