ಕೆ‌.ಬೊದೂರು ತಾಂಡಾ: ಸರ್ಕಾರಿ ಶಾಲೆ ಚಾವಣಿ ಶಿಥಿಲ, ಭಯದಲ್ಲೇ ಪಾಠ!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಸರ್ಕಾರಿ ಶಾಲೆಯೊಂದರ ಚಾವಣಿ ಕಿತ್ತು ಶಿಥಿಲಾವಸ್ಥೆಗೊಳಪಟ್ಟ ಕೊಠಡಿಗಳಲ್ಲಿ ಮಕ್ಕಳು ಹಾಗೂ ಶಿಕ್ಷಕರು ನಿತ್ಯ ಭಯದಲ್ಲೇ ಪಾಠ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ.ಬೊದೂರು ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೇಯ ಕಟ್ಟಡ ಇದಾಗಿದೆ. 1 ರಿಂದ ಐದನೇ ತರಗತಿ ಹೊಂದಿರುವ ಈ ಶಾಲೆಯಲ್ಲಿ ಸುಮಾರು 220 ಮಕ್ಕಳು ವಿದ್ಯಾಭ್ಯಾಸ ಮಾಡುತಿದ್ದಾರೆ. ಈ ಶಾಲೆಗೆ ನಾಲ್ಕು ಕೊಠಡಿಗಳಿದ್ದು, ಒಂದರಲ್ಲಿ ಆಫೀಸ್ ಜೊತೆಗೆ ಬಿಸಿಯೂಟದ ಸಾಮಗ್ರಿಗಳನ್ನು ಇರಿಸಲಾಗಿದೆ. ಇನ್ನುಳಿದ ಮೂರು ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.

ಈ ಎಲ್ಲಾ ಕೊಠಡಿಗಳ ಚಾವಣಿಯ ಸಿಮೆಂಟ್ ಪದರು ಕಿತ್ತು ಬೀಳುತಿದ್ದು, ತುಕ್ಕು ಹಿಡಿದ ಕಬ್ಬಿಣದ ಸರಳುಗಳು ಕಾಣಿಸುತ್ತಿವೇ ಯಾವುದೇ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಮಕ್ಕಳ ಮೇಲೆ ಚಾವಣಿ ಕತ್ತರಿಸಿ ಬಿದ್ದು ಅಪಾಯ ಸಂಭವಿಸುವ ಸಾದ್ಯತೆ ಇದೆ. ಕೂಡಲೇ ಸಂಬಂಧಿಸಿದ ಶಿಕ್ಷಣ ಇಲಾಖೆ ಹಾಗೂ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತು ಕ್ರಮಕೈಗೊಳ್ಳಬೇಕು ಎಂದು ಮಕ್ಕಳ ಪಾಲಕರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.