ಜ.5 ರಂದು ಕ.ಕಾ.ಪ.ಸಂ. ಸರ್ವ ಸದಸ್ಯರ, ರಾಜ್ಯ ಕಾರ್ಯಕಾರಿ ಸಮಿತಿ ಸಭೆ : ಶಿವಾನಂದ ತಗಡೂರ

ಕೃಷಿಪ್ರಿಯ ನ್ಯೂಸ್ |

ಬೆಂಗಳೂರು/ಕೊಪ್ಪಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ( ನೊಂ) ರಾಜ್ಯ ಘಟಕದಿಂದ 2024 ಜನವರಿ 05 ರಂದು ಮಂಗಳೂರಿನಲ್ಲಿ ಸಂಘದ ಸರ್ವ ಸದಸ್ಯರ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಆಯೋಜಿಸಲಾಗಿದೆ.

ಈ ಕುರಿತು ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಸಭಾಂಗಣ, ಆಡ್ಯಾರ್ ನಲ್ಲಿ ಬೆಳಗ್ಗೆ 11 ಗಂಟೆಗೆ 2022-23 ನೇ ಸಾಲಿನ 90 ನೇ ಸರ್ವಸದಸ್ಯರ ಮಹಾಸಭೆ ನಡೆಯಲಿದೆ. ಈ ವೊಂದು ಮಹಾಸಭೆಯಲ್ಲಿ ಸರ್ವ ಸದಸ್ಯರು ತಪ್ಪದೆ ಭಾಗವಹಿಸಲು ಕೋರಿದ್ದಾರೆ. ಜೊತೆಗೆ ಅದೇ ದಿನ ಬೆಳಗ್ಗೆ 10 ಗಂಟೆಗೆ ನಡೆಯುವ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಸಮಿತಿಯ ಸದಸ್ಯರು ಭಾಗವಹಿಸಲು ರಾಜ್ಯಾಧ್ಯಕ್ಷರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ :
ವಿಶೇಷವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೇಟ್ ಪಂದ್ಯಾವಳಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಜನೇವರಿ 5 ರಂದು ಆಯೋಜಿಸಿದೆ.
ಮೂರು (3) ದಿನಗಳ ಕಾಲ ನಡೆಯುವ ಕ್ರಿಕೇಟ್ ಪಂದ್ಯಾವಳಿಯ ಕಾರ್ಯಕ್ರಮವನ್ನು ಅಂದು ಸಂಜೆ ಉದ್ಘಾಟನೆಯಾಗಲಿದೆ. ಜನೇವರಿ 6 ಮತ್ತು 7 ರಂದು ಪಂದ್ಯಾವಳಿ ನಡೆಯಲಿದೆ.
ರಾಜ್ಯಮಟ್ಟದ ಪತ್ರಕರ್ತರ ಕ್ರಿಕೇಟ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಜಿಲ್ಲಾ ಘಟಕದ ತಂಡಗಳು ಜಿಲ್ಲಾ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಮೂಲಕ ಇದೇ ಡಿಸೆಂಬರ್ 20ರ ಒಳಗೆ ತಮ್ಮ ಜಿಲ್ಲಾ ತಂಡದ ಹೆಸರನ್ನು ಮಂಗಳೂರು ಜಿಲ್ಲಾ ಘಟಕದ ಬಳಿ ನೋಂದಾಯಿಸಿಕೊಳ್ಳಬೇಕು ಎಂದು ರಾಜ್ಯಾಧ್ಯಕ್ಷರು ಈ ಮೂಲಕ ಮಾಹಿತಿ ನೀಡಿದ್ದು, ಜನವರಿ 5 ಮತ್ತು 6 ರಂದು ಎಲ್ಲಾ ಜಿಲ್ಲೆಗಳಿಂದ ಆಗಮಿಸುವ ಪ್ರತಿ ತಂಡದ 15 ಜನ ಆಟಗಾರರಿಗೆ ಮಾತ್ರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರು 2023-2024ನೇ ಸಾಲಿನ ಸಂಘದ ಗುರುತಿನ ಚೀಟಿ ತರಬೇಕು. ಎಲ್ಲಾ ಜಿಲ್ಲಾ ಘಟಕಗಳು ಈ ಪಂದ್ಯಾವಳಿಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಕೋರಿದ್ದಾರೆ.