ಹುಚ್ಚುನಾಯಿ ಪ್ರಕರಣ: ಕುಷ್ಟಗಿಯಲ್ಲಿ 210 ಬೀದಿ ನಾಯಿಗಳಿಗೆ ಲಸಿಕೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಡಿಸೆಂಬರ್ 14ರಂದು ಹುಚ್ಚುನಾಯಿ ಕಡಿತದಿಂದ ಜನ ಆಸ್ಪತ್ರೆಗೆ ದಾಖಲಾಗಿದ್ದರು. ಇತರೆ ನಾಯಿಗಳಿಗೂ ಹುಚ್ಚುನಾಯಿ ಸೋಂಕು ಹರಡತ್ತದೆ ಎಂದು ಅರಿತ ಪುರಸಭೆ ಭಾನುವಾರ ನಾಯಿಗಳ ಸೆರೆ ಹಿಡಿದು ಲಸಿಕೆ ಹಾಕಿಸುವ ಕಾರ್ಯಚರಣೆ ನಡೆಸಿತು.

ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅವರ ಮಾರ್ಗದರ್ಶನ ಮೇರೆಗೆ ನೈರ್ಮಲ್ಯಾಧಿಕಾರಿ ಪ್ರಾಣೇಶ ಅವರು, ನಾಯಿಗಳ ಜೀವಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ವೈಜ್ಞಾನಿಕವಾಗಿ ಸೆರೆ ಹಿಡಿಯಲು ಮೈಸೂರಿನಿಂದ ನಾಯಿಗಳ ಸೆರೆ ಹಿಡಿಯುವಲ್ಲಿ ಪರಿಣಿತಿ ಹೊಂದಿರುವ ತಂಡವೊಂದನ್ನು ಕರೆಯಿಸಿದ್ದರು.

ಇಲ್ಲಿಯ 23 ವಾರ್ಡಗಳಲ್ಲಿ ಸಂಚರಿಸಿದ ತಂಡ, ದುರ್ಗಾ ಕಾಲೋನಿ, ಬಾಲಕಿಯರ ಕಾಲೇಜು ಪ್ರದೇಶ, ಪುರಸಭೆ ಸುತ್ತಮುತ್ತಲಿನ ಪ್ರದೇಶ, ಹಳೇ ಬಜಾರ ಶಾಮಿದಲಿ ಕಟ್ಟಿ ಪ್ರದೇಶ ಸೇರಿದಂತೆ ನಾಯಿಗಳಿರು ಪ್ರದೇಶಗಳಲ್ಲಿ ಸಂಚರಿಸಿ ಸೆರೆ ಹಿಡಿಯಿಡಿದು ಲಸಿಕೆ ನೀಡಲಾಯಿತು. ಈ ಕುರಿತು ಪುರಸಭೆ ನೈರ್ಮಲ್ಯಾಧಿಕಾರಿ ಪ್ರಾಣೇಶ ಬಳ್ಳಾರಿ ಅವರು, ಒಟ್ಟು 210 ನಾಯಿಗಳನ್ನು ಸೆರೆ ಹಿಡಿದು ಪಶು ಆಸ್ಪತ್ರೆಯಲ್ಲಿ ಪ್ರಾಣಿಗಳಿಗೆ ನೀಡುವ ರೋಗನಿರೋಧಕ ಲಸಿಕೆ ಹಾಕಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸದ್ಯ ಜನತೆ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ, ಆದರೆ, ಪಟ್ಟಣದ ಹೃದಯಭಾಗದ ಕಾಯಿಪಲ್ಯೆ ಸಂತೆ ಮಾರುಕಟ್ಟೆ ಪ್ರದೇಶದಲ್ಲಿ ಪುರಸಭೆ ವಾಣಿಜ್ಯ ಮಳಿಗೆಗಳ ಮುಂದೆ ಪುಟ್ಪಾತ್ ಜಾಗೆಯಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟಿ ಮಾಂಸ ಮಾರುಕಟ್ಟೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದರೆ ನಾಯಿಗಳ ಹಾವಳಿ ತಪ್ಪಿಸಲು ಸಾದ್ಯ ಈ ನಿಟ್ಟಿನಲ್ಲಿ ಪುರಸಭೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.