ನಿಡಶೇಸಿ : ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ: ತಾಲೂಕಿನ ನಿಡಶೇಸಿ ಗ್ರಾಮದಲ್ಲಿ ಗುರುವಾರ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.

ಹುಲಿಗೆಮ್ಮದೇವಿ ದೇವಾಲಯದ ಆವರಣದಲ್ಲಿ, ಪರಶುರಾಮಸಿಂಗ್ ಪ್ರಧಾನ ಆರ್ಚಕರು ಕನಕದಾಸರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರ ಮೆರವಣಿಗೆ ನಡೆಯಿತು. ಮಹಿಳೆಯರು ಪೂರ್ಣ ಕುಂಭಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹನಮಸಾಗರ ರಸ್ತೆಯ ಸಮುದಾಯ ಭವನದ ವರೆಗೆ ಮೆರವಣಿಗೆ ಸಾಗಿತು. ಡೊಳ್ಳು ಕುಣಿತ ಮೇಳ ಗಮನಸೆಳೆಯಿತು.

ಗ್ರಾ.ಪಂ.ಸದಸ್ಯರಾದ ಹೊನ್ನಮ್ಮ ಗಾದಾರಿ, ರೇವತಿ ಬಂಡಿಹಾಳ, ಈರಪ್ಪ ಮಕಾಸಿ, ಮಂಜುನಾಥ ಗುಳಗುಳಿ, ರಾಯಪ್ಪ ಪೂಜಾರ ಪ್ರಮುಖರಾದ ಯಂಕಪ್ಪ ಹಿರೇಯಂಕಪ್ಪನವರ, ಹನಮಪ್ಪ ದಾಸರ, ಶರಣಪ್ಪ ಗುಡಸಲಿ, ಶರಣಪ್ಪ ಹಾದಿಮನಿ, ಕನಕಪ್ಪ ಅಗಸಿಮುಂದಿನ, ಶಂಕ್ರಪ್ಪ ಹೊಸಗೇರಿ, ಶರಣಪ್ಪ ಹಾವರಗಿ, ಅಶೋಕಸ್ವಾಮಿ, ವಿಠ್ಠಲ ಚಳಗೇರಿ, ಚನ್ನಪ್ಪ ಮೇಟಿ, ಶಿವಪ್ಪ ಗಾದಾರಿ, ಪರಶುರಾಮ ಶಿರಗುಂಪಿ, ಪರಸಪ್ಪ ಗಾದಾರಿ, ಹನಮಪ್ಪ ಬಂಡಿಹಾಳ, ಗ್ಯಾನಪ್ಪ ಗಾದಾರಿ, ಪರಸಪ್ಪ ಬಂಡಿಹಾಳ, ಹನಮಪ್ಪ ದೋಟಿಹಾಳ, ಬಸಲಿಂಗಪ್ಪ ಹೆಸರೂರ ಇತರರಿದ್ದರು.

ವರದಿ : ರಾಮಣ್ಣ ಬಂಡಿಹಾಳ