ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಸಾವನ್ನಪ್ಪಿದ ನವಜಾತ ಗಂಡು ಶಿಶುವೊಂದನ್ನು ಕಸದಲ್ಲಿ ಬಿಸಾಕಿರುವುದು ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ.
ಪಟ್ಟಣದ ಬಸ್ ನಿಲ್ದಾಣ ಹಿಂಭಾಗದ ತಡೆಗೋಡೆ ಪ್ರದೇಶದ ಕಸದಲ್ಲಿ ಎಸೆಯಲಾದ ಸಾವನ್ನಪ್ಪಿದ ಗಂಡು ಶಿಶು ಇದಾಗಿದೆ, ಭವಿಷ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ಯಾರೋ ತಾಯಿಯೊಬ್ಬಳು ತನ್ನ ಸತ್ತ ಗಂಡು ಶಿಶುವನ್ನು ರಟ್ಟಿನ ಡಬ್ಬಿಯೊಳಗೆ ತಂದು ಎಸೆದಿರಬಹುದು ಎನ್ನಲಾಗಿದೆ. ಸತ್ತ ಶಿಶುವಿಗೆ ಇರುವೆ ನೊಣಗಳು ಮುಕ್ಕಿದ್ದು ಕಂಡ ರಸ್ತೆಯಲ್ಲಿ ಸಂಚರಿಸುತಿದ್ದ ಸಾರ್ವಜನಿಕರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಿಎಸ್’ಐ ಮುದ್ದುರಂಗಸ್ವಾಮಿ, ಎಎಸೈ ತಾಯಪ್ಪ ಹಾಗೂ ಪೊಲೀಸ್ ಸಿಬ್ಬಂದಿ ಪರಿಶೀಲಿಸಿದರು. ಬಳಿಕ ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಸಿಬ್ಬಂದಿ ಹಾಗೂ ಆಂಬುಲೆನ್ಸ್ ಕರೆಯಿಸಿ ಶಿಶುವಿನ ಮೃತ ದೇಹವನ್ನು ತೆಗೆದುಕೊಂಡು ಹೋಗಲಾಗಿದೆ. ಈ ಕುರಿತು ಪೊಲೀಸರು ವಿಚಾರಣೆ ನಡೆಸುತಿದ್ದಾರೆ.