ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ: ಹಂಪಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪಟ್ಟಣದ ನಾಲ್ವರು ಕಲಾವಿದರ ತಂಡ ಆಯ್ಕೆಯಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವಿಜಯನಗರ ಜಿಲ್ಲಾಡಳಿತ ಸಹಭಾಗಿತ್ವದಲ್ಲಿ 2024ನೇ ಸಾಲಿನ ಫೆ.02, 03 ಮತ್ತು 04 ರಂದು ಹಂಪಿ ಉತ್ಸವ’ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಫೆ.2 ರಂದು ಎದುರು ಬಸವಣ್ಣ ವೇದಿಕೆಯಲ್ಲಿ
ಕುಷ್ಟಗಿಯ ದುರುಗಪ್ಪ ಹಿರೇಮನಿ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಪ್ರಸ್ತುತ ಪಡಿಸಲಿದ್ದಾರೆ. ಫೆಬ್ರವರಿ 04 ರಂದು ದಾವಲಸಾಬ ಅತ್ತಾರ ಮತ್ತು ತಂಡದಿಂದ ಗೀಗಿಪದ, ಹನುಮಸಾಗರದ ವಿನೋದ ಭಗೀರಥ ಪಾಟೀಲ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅದೇದಿನ ಸಾಸಿವೆಕಾಳು ಗಣಪತಿ ವೇದಿಕೆಯಲ್ಲಿ ಕುಷ್ಟಗಿಯ ಪಂಡಿತ ಎಸ್.ಎಸ್. ಹಿರೇಮಠ ಮತ್ತು ಅವರ ತಂಡ ತಬಲಾ ಸೋಲೋ ಕಲೆಯನ್ನು ಪ್ರಸ್ತುತ ಪಡಿಸಲಿದ್ದಾರೆ. ಹಂಪಿ ಉತ್ಸವಕ್ಕೆ ತಾಲೂಕಿನ ಈ ನಾಲ್ವರು ಕಲಾವಿದರು ಆಯ್ಕೆಯಾದ ಹಿನ್ನೆಲೆ ಸಾಹಿತ್ಯ, ಸಂಗೀತ, ಜಾನಪದ ಕ್ಷೇತ್ರದ ಬಳಗ ಹಾಗೂ ಅವರ ಸ್ನೇಹಿತರು ಹರ್ಷವ್ಯಕ್ತಪಡಿಸಿದ್ದಾರೆ.