ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ವಕೀಲ ಚಂದ್ರಶೇಖರ ಉಪ್ಪಿನ ಅವರಿಗೆ ಸೇರಿದ ಮನೆ ಕಳ್ಳತನವಾಗಿದೆ..!
ಶನಿವಾರ ತಡರಾತ್ರಿ ವೇಳೆಗೆ ಮನೆಯ ಪ್ರಮುಖ ಬಾಗಿಲಿಗೆ ಹಾಕಿದ ಕೀಲಿಮಣೆ ಹಾರಿಸಿದ ಕಳ್ಳರು ಮನೆ ಪ್ರವೇಶಿಸುವ ಮೂಲಕ ಒಳ ಕೊಣೆಯಲ್ಲಿ ಲಾಕರನಲ್ಲಿದ್ದ 110 ಗ್ರಾಂ ಬಂಗಾರ (11 ತೊಲೆ), 1500 ಗಾಂ ಬೆಳ್ಳಿ ಹಾಗೂ 1,60,000=00 ಹಣ ತೆಗೆದುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಕುಷ್ಟಗಿಯಲ್ಲಿ ವಾಸವಾಗಿರುವ ವಕೀಲ ಚಂದ್ರಶೇಖರ ಉಪ್ಪಿನ ಅವರ ಹನುಮನಾಳ ನಿವಾಸದಲ್ಲಿ ಅವರ ತಾಯಿವೊಬ್ಬರೇ ವಾಸಿಸುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ. ಅವರ ತಾಯಿ ಕೂಡಾ ಶನಿವಾರ ದಿನ ವಾಸ ಇಲ್ಲದ್ದನ್ನು ಗಮನಿಸಿದ ಕಳ್ಳರು ಹೊಂಚು ಹಾಕಿ ಕಳ್ಳತನಕ್ಕೆ ಮುಂದಾಗಿರುವುದು ಸ್ಪಷ್ಟವಾಗಿದೆ. ಹನುಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ..!!