ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಸಮೀಪದ ಕಿಡದಾಳ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯತ ಸಿಇಓ ಫೌಜಿಯಾ ಬಿ ತರುನ್ನಮ್ ಭೇಟಿ ನೀಡಿ, ಪರಿಶೀಲನೆ ನಡೆಸಿದ ಘಟನೆ ಜರುಗಿತು..!
ಶಾಲೆಗೆ ಭೇಟಿ ನೀಡಿದ ಸಿಇಓ ಅವರು ಮೊದಲು ವಿದ್ಯಾರ್ಥಿಗಳ ಯೋಗ ಕ್ಷೇಮ ವಿಚಾರಿಸಿದ್ದಲ್ಲದೆ, ಪಠ್ಯದ ವಿವರಣೆ ಪಡೆದು, ಕಾಗುಣಿತ, ಗಡಿಯಾರ ಮಾಹಿತಿ ನೀಡಿದ್ದಾರೆ. ಕೆಲ ಸಮಯ ಮಕ್ಕಳೊಂದಿಗೆ ಕಾಲ ಕಳೆದ ಅವರು, ಮಕ್ಕಳ ಜೊತೆಗೆ ಮಧ್ಯಾಹ್ನದ ಬಿಸಿಯೂಟ ಸವಿಯುವ ಮೂಲಕ ಸರಳತೆ ಮೆರೆದಿರುವುದು ವಿಶೇಷ. ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು..!!