ರಂಗಭೂಮಿ ಹಿರಿಯ ಸಂಗೀತ ನಿರ್ದೇಶಕ ಐ.ಡಿ.ಬಾಬು ಇನ್ನಿಲ್ಲ

 

 

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ): ಹಿರಿಯ ರಂಗಭೂಮಿ ಹಿರಿಯ ಸಂಗೀತ ನಿರ್ದೇಶಕ ಐ.ಡಿ.ಬಾಬು(85) ಅವರು ಜಿಲ್ಲೆಯ ಕುಷ್ಟಗಿ ಪಟ್ಟಣದ ವಿಷ್ಣುತೀರ್ಥ ನಗರದ ಸ್ವಗೃಹದಲ್ಲಿ ನಮ್ಮನ್ನ ಅಗಲಿದ್ದಾರೆ..!
     ದುತ್ತುರಗಿ, ಅರಿಷಿಣಗುಡಿ ಸೇರಿದಂತೆ ನಾಡಿನ ಹಲವು ಡ್ರಾಮಾ ಕಂಪನಿಗಳಲ್ಲಿ ಸಂಗೀತ ನಿರ್ದೇಶಕರಾಗಿ ಹಾಗೂ ಹಿನ್ನೆಲೆ ಗಾಯಕರಾಗಿ ಸೇವೆ ಸಲ್ಲಿಸಿರುವ ಐ.ಡಿ.ಬಾಬು ಅವರ ಸಂಗೀತ ಸೇವೆಗೆ ಹಲವು ಪ್ರಶಸ್ತಿ ಗೌರವಗಳು ಲಭಿಸಿವೆ. ನಿವೃತ್ತಿ ಬಳಿಕ ಪಟ್ಟಣದಲ್ಲಿ ನಿಸರ್ಗ ಸಂಗೀತ ಶಾಲೆ ತೆರೆದು ಹಲವು ಮಕ್ಕಳು, ಯುವಕರಿಗೆ ಸಂಗೀತ ಶಿಕ್ಷಣ ಸೇವೆ ಸಲ್ಲಿಸುತ್ತಿದ್ದರು. ಪತ್ನಿ, ಪುತ್ರ ಸಮಾಜ ಸೇವಕ ವಜೀರಲಿ ಬಿ. ಗೋನಾಳ ಹಾಗೂ ಮೂರು ಜನ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಮಿತ್ರರು, ಶಿಷ್ಯ ಬಳಗವನ್ನು ತೊರೆದಿರುವ ಐ.ಡಿ.ಬಾಬು ಅವರ ನಿಧನಕ್ಕೆ ತಾಲೂಕಿನ ಜನಪ್ರತಿನಿಧಿಗಳು, ಗಣ್ಯರು ಹಾಗೂ ಕಲಾವಿದರು ಕಂಬನಿ ಮಿಡಿದಿದ್ದಾರೆ. ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಪಟ್ಟಣದ ಹೊರವಲಯದ ಖಬರಸ್ತಾನ್ ದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ..!!

(ಸುದ್ದಿ ಕೃಪೆ : ಮುನಿ , ಕುಷ್ಟಗಿ)