ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಅನ್ಯ ಇಲಾಖೆಗಳಿಗೆ ಸೇವೆ ಮೇಲೆ ನಿಯೋಜನೆಗೊಂಡು ಇನ್ನೂ ಮಾತೃ ಇಲಾಖೆಗೆ ಮರಳದಿರುವ ಶಿಕ್ಷಕರ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗಿ, ಕ್ರಮದ ವರದಿ ಸಲ್ಲಿಸಲು ಶಿಕ್ಷಣ ಇಲಾಖೆ ಆಯುಕ್ತರು ಆಯಾ ಜಿಲ್ಲೆಗಳ ಡಿಡಿಪಿಐ ಹಾಗೂ ಸಿಇಓ ಅವರಿಗೆ ಖಡಕ್ ಆದೇಶ ರವಾನಿಸಿದ್ದಾರೆ..!
ವಿವಿಧ ಇಲಾಖೆಗಳಿಗೆ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2018-19 ರಿಂದ 2020-21 ರ ಸಾಲಿಗಾಗಿ ಪ್ರಾಥಮಿಕ/ಪ್ರೌಢ ಶಾಲಾ ಶಿಕ್ಷಕರುಗಳ ನಿಯೋಜನೆ ಮಾರ್ಚ 2021 ಕ್ಕೆ ಅಂತ್ಯವಾಗಿದೆ. ಕೆಲವು ಶಿಕ್ಷಕರು ಬೋಧಕೆತರ ಹುದ್ದೆಗಳಿಗೆ ನಿಯೋಜನೆಗೊಳಿಸಿರುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಸೇರಿದಂತೆ ಶೈಕ್ಷಣಿಕ ಬೆಳವಣಿಗೆ ಹಿನ್ನಡೆಯಾಗಿರುವುದನ್ನು ಸ್ಪಷ್ಟಪಡಿಸಿಕೊಂಡ ಇಲಾಖೆ ಎಚ್ಚತ್ತುಗೊಂಡು, ನಿಯೋಜನೆಗೊಂಡು ಸೇವೆಯಲ್ಲಿಯೇ ಮುಂದುವರೆದಿರುವ ಶಿಕ್ಷಕರ ಮೇಲೆ ಸೂಕ್ತ ಕ್ರಮ ಜರುಗಿಸುವುದಲ್ಲದೆ, ಮಾತೃ ಶಿಕ್ಷಣ ಇಲಾಖೆಗೆ ವಾಪಸಾಗಲು ತೆಗೆದುಕೊಂಡಿರುವ ಕ್ರಮಗಳ ವರದಿ ಸಲ್ಲಿಸುವಂತೆ ಆಯಾ ಜಿಲ್ಲೆಗಳ ಉಪ ನಿರ್ದೇಶಕರು ಮತ್ತು ಜಿಪಂ ಸಿಇಓ ಅವರುಗಳಿಗೆ ನೀಡಿದ ಖಡಕ್ ಆದೇಶವು ಶಿಕ್ಷಣ ಇಲಾಖೆ ಆಯುಕ್ತರಿಂದ ಹೊರಬಿದ್ದಿದೆ. ಇನ್ನೂ ಮೇಲೆಯಾದರೂ ತಮ್ಮ ರಾಜಕೀಯ ಪ್ರಭಾವ ಬೆಳೆಸಿಕೊಂಡು ಶಿಕ್ಷಕರು ತಮ್ಮ ಆದಾಯ ಹುದ್ದೆಗಳಲ್ಲಿಯೇ ಮುಂದುವರೆಯುತ್ತಾರಾ ಅಥವಾ ಮಾತೃ (ಶಿಕ್ಷಣ) ಇಲಾಖೆಗೆ ಮರಳುತ್ತಾರಾ ಕಾಯ್ದು ನೋಡಬೇಕಾಗಿದೆ..!!