ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಈಜಿಪ್ಟ್ ದೇಶದ ಲುಕ್ಸಾನ್ ನಗರದಲ್ಲಿ ಜರುಗುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದಿಂದ ಭಾಗವಹಿಸುವ ನಮ್ಮ ಧಾರವಾಡದ ಬೆಡಗಿ ‘ಖುಷಿ ಟಿಕಾರೆ’ ನಮಗೆ ಹೆಮ್ಮೆಯ ಸಂಗತಿ..!
ಇದೇ ಡಿಸೆಂಬರ್ 10 ರಿಂದ 24 ರವರೆಗೆ ಈಜಿಪ್ಟ್ ನಲ್ಲಿ ಜರುಗುವ ‘ಮಿಸ್ ಇಕೋ ಟೀನ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಖುಷಿ ಟಿಕಾರೆ ಭಾಗವಹಿಸಲಿದ್ದಾಳೆ. ಮೂಲತಃ ಧಾರವಾಡದವರಾದ ಏಕನಾಥ ಮತ್ತು ಶೈಲಜಾ ಟಿಕಾರೆ ದಂಪತಿಗಳ ಜೇಷ್ಠ ಸುಪುತ್ರಿಯಾಗಿರುವ ಖುಷಿ 18 ವರ್ಷದ ಬೆಡಗಿ. 35 ದೇಶಗಳ ಸುಂದರಿಯರ ಮಧ್ಯದಲ್ಲಿ ಜರುಗುವ ಬಹು ದೊಡ್ಡ ಸ್ಪರ್ಧೆಯಲ್ಲಿ ಭಾರತದ ‘ಖುಷಿ’ ಜಯಶಾಲಿಯಾದರೇ ಹಿಂದುಸ್ತಾನಿಗಳ ಪಾಲಿಗೆ ಎಲ್ಲಿಲ್ಲದ ಖುಷಿಯೋ ಖುಷಿ ಅಲ್ಲವೇ..!?