ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ತಮಿಳುನಾಡಿನ ಕುನ್ನೂರು ಬಳಿ ಸೇನಾ ಹೆಲಿಕಾಪ್ಟರ್ ಪತನವಾಗಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ಲಕ್ಷ್ಮಣ ಸಿಂಗ್ ರಾವತ್ ಅವರು ಹುತಾತ್ಮರಾದ ಹಿನ್ನೆಲೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು..!
ಪಟ್ಟಣದ ಮಲ್ಲಯ್ಯ ವೃತ್ತದಲ್ಲಿ ತಾಲೂಕಾ ಮಾಜಿ ಸೈನಿಕರ ಸಂಘ, ಡಾ.ರಾಜಕುಮಾರ ಅಭಿಮಾನಿಗಳ ಸಂಘ ಸೇರಿದಂತೆ ಸಾರ್ವಜನಿಕರಿಂದ ಜನರಲ್ ಬಿಪಿನ್ ಲಕ್ಷ್ಮಣ ಸಿಂಗ್ ರಾವತ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗಿತು.
ಸ್ಥಳೀಯ ಪಿಎಸ್ಐ ತಿಮ್ಮಣ್ಣ ನಾಯಕ, ಮಾಜಿ ಸೈನಿಕರ ಸಂಘದ ತಾಲೂಕಾಧ್ಯಕ್ಷ ಹಂಪನಗೌಡ ಬಳೂಟಗಿ, ಮಾಜಿ ಸೈನಿಕ ರಫೀಕ್, ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಸದಸ್ಯ ಮುತ್ತಣ್ಣ ಬಾಚಲಾಪೂರ, ಫಕೀರಪ್ಪ ಹೊಸವಕ್ಕಲ, ಚಾಲಕ ಸಂಗಮೇಶ ಸೇರಿದಂತೆ ಇನ್ನಿತರರು ಬಿಪಿನ್ ರಾವತ್ ಅವರ ಆತ್ಮಕ್ಕೆ ಶಾಂತಿ ಕೋರಿದರು..!!