ಗ್ರಾಪಂ ಸದಸ್ಯರಿಂದ ಹಕ್ಕು ಚಲಾವಣೆ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರಾಯಚೂರು ಕೊಪ್ಪಳ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಸದಸ್ಯರಿಂದ ವಿಧಾನ ಪರಿಷತ್ ಗೆ ಒಂದು ಸ್ಥಾನಕ್ಕೆ ಇಂದು (10-12-2021) ಜರುಗಿರುವ ಚುನಾವಣೆಯು ಜಿಲ್ಲೆಯಲ್ಲಿ ಶಾಂತಿಯುತವಾಗಿ ಜರುಗಿತು..!         
    ಕೊಪ್ಪಳ ಹಾಗೂ ಗಂಗಾವತಿ ನಗರಸಭೆಗಳು ಸೇರಿದಂತೆ ಪುರಸಭೆ ಮತ್ತು ಗ್ರಾಮ ಪಂಚಾಯತಿಗಳ ಸದಸ್ಯರುಗಳು ತಮ್ಮ ಹಕ್ಕನ್ನು ಚಲಾಯಿಸಿದರು. ಕೆಲ ಪಂಚಾಯಿತಿಗಳಲ್ಲಿ 11 ಗಂಟೆಗಾಗಲೇ ಶೇ 100 ರಷ್ಟು ಮತದಾನವಾಗಿರುವ ಬಗ್ಗೆ ವರದಿಯಾಗಿರುವುದು ತಿಳಿದುಬಂದಿತು. ಹಣದ ಚುನಾವಣೆ ಎಂದೇ ಕರೆಯಿಸಿಕೊಳ್ಳುವ ಈ ಚುನಾವಣೆಯಲ್ಲಿ ಒಬ್ಬೊಬ್ಬ ಮತದಾರರಿಗೆ 20 ಸಾವಿರ ರೂಪಾಯಿಗಳಿಗೂ ಅಧಿಕ ಹಣ ಹಂಚಿಕೆಯಾಗಿರುವುದು ಕೇಳಿಬಂದಿತು..!!