ರಾಯಚೂರ ಕೊಪ್ಪಳ ಚುನಾವಣೆ : ಶೇ 99.86 ರಷ್ಟು ಮತದಾನ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರಾಯಚೂರು ಕೊಪ್ಪಳ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಸದಸ್ಯರಿಂದ ವಿಧಾನ ಪರಿಷತ್ತಿಗೆ 10-12-2021 ರಂದು ಜರುಗಿದ ಚುನಾವಣೆಯಲ್ಲಿ ಶೇ 99.86 ರಷ್ಟು ಮತದಾನವಾಗಿರುವ ಬಗ್ಗೆ ವರದಿಯಾಗಿದೆ..!


    ರಾಯಚೂರು ಕೊಪ್ಪಳ ಎರಡು ಜಿಲ್ಲೆಗಳ 14 ತಾಲೂಕುಗಳಲ್ಲಿನ ಒಟ್ಟು 6497 ಸ್ಥಳೀಯ ಸಂಸ್ಥೆಗಳ ಸದಸ್ಯರ ಪೈಕಿ 6488 ಜನ ಸದಸ್ಯರು ಮತದಾನ ಮಾಡಿದ್ದಾರೆ. ಇದರಲ್ಲಿ 2977 ಜನ ಪುರುಷರು, 3511 ಜನ ಮಹಿಳಾ ಮತದಾರರು ಮತದಾನ ಮಾಡುವ ಮೂಲಕ ಶೇ. 99.86 ಮತದಾನಕ್ಕೆ ಕಾರಣವಾಗಿದ್ದಾರೆ. 9 ಜನ ಮತದಾರರು ಮತದಾನದಿಂದ ದೂರ ಉಳಿದಿರುವುದು ವಿಶೇಷ. ಸಾಕಷ್ಟು ಪೈಪೋಟಿ ಮೂಲಕ ಜರುಗಿದ ಈ ಚುನಾವಣೆಯಲ್ಲಿ ಹಣದ ಹೊಳೆ ಹರಿದಿರುವುದು ಕೇಳಿಬಂದಿತು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮಧ್ಯ ಜರುಗಿದ ನೇರ ಪೈಪೋಟಿಯಲ್ಲಿ ವಿಜಯಮಾಲೆ ಯಾರ ಕೊರಳಿಗೆ ಬೀಳುತ್ತೇ ಎಂಬುದನ್ನು ಕಾದು ನೋಡಬೇಕಾಗಿದೆ..!!