ಹುತಾತ್ಮ ಸೈನಿಕರಿಗೆ ಸಂಘಟನೆಗಳಿಂದ ಗೌರವ ನಮನ

 

 

ಕೃಷಿ ಪ್ರಿಯ ನ್ಯೂಸ್ |

ಸಂಗಮೇಶ ಮುಶಿಗೇರಿ

ಕೊಪ್ಪಳ (ಕುಷ್ಟಗಿ): ತಮಿಳುನಾಡಿನ ಕೂನೂರ್ ಬಳಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ
ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಇತರೆ
ಸೈನಿಕರಿಗೆ ಇಲ್ಲಿಯ ಹೈದ್ರಾಬಾದ್ ಕರ್ನಾಟಕ
ಯುವಶಕ್ತಿಯಿಂದ ಕ್ಯಾಂಡಲ್ ಬೆಳಗುವುದರ
ಮೂಲಕ ಗೌರವ ನಮನ ಸಲ್ಲಿಸಲಾಗಿತ್ತು..!
ಕುಷ್ಟಗಿ ಪಟ್ಟಣದ ಮಲ್ಲಯ್ಯ ವೃತ್ತದಲ್ಲಿ ಡಿ.10-12-2021 ರಂದು ಹೈ.ಕ. ಯುವಶಕ್ತಿ ಸಂಘಟನೆ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹುತಾತ್ಮರ ಗೌರವಾರ್ಥವಾಗಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಪುರಸಭೆ ಅಧ್ಯಕ್ಷ ಗಂಗಾಧರ ಕೆ.ಹಿರೇಮಠ ಅವರು ಹುತಾತ್ಮ ಸೈನಿಕರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಿದರು. ಬಳಿಕ ಮಾತನಾಡಿ, ಜನರಲ್ ಬಿಪಿನ್ ರಾವತ್ ಅವರು ಭಾರತದ ಮೂರು ಸೇನಾ ಪಡೆಯ ಅಧಿಕಾರಿಯಾಗಿದ್ದರು. ಅವರ ಸೇವಾ ದಕ್ಷತೆ ಅನುಕರಣೀಯ. ಭಯೋತ್ಪಾದನೆ ನಿಗ್ರಹಕ್ಕೆ ಕೈಗೊಂಡ ಸರ್ಜಿಕಲ್ ಸ್ಟ್ರೈಕ್ ಅಲ್ಲಿ ಅವರ ಪಾತ್ರ ಪ್ರಮುಖವಾಗಿದೆ ಎಂದು ನೆನಪು ಮೆಲುಕುಹಾಕಿದರು. ಹೈಕ ಯುವಶಕ್ತಿ ಸಂಸ್ಥಾಪಕ ಬಸವರಾಜ ಗಾಣಿಗೇರ್ ಮಾತನಾಡಿ, ದೇಶದ ಮೊದಲ ಸಿಡಿಎಸ್ ಅಧಿಕಾರಿಯಾಗಿದ್ದ ಜನರಲ್ ಬಿಪಿನ್ ಅವರು ಜನಮಾನಸರಾಗಿದ್ದರು. ತಮಿಳುನಾಡಿನಾ ಪೊಳೂರ್ ಸೇನಾ ಕಾಲೇಜಿಗೆ ಉಪನ್ಯಾಸ ನೀಡಲು ತೆರಳುವ ಸಂದರ್ಭದಲ್ಲಿ ಯಾರೂ ಉಹಿಸದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಅವರು ನಮ್ಮನ್ನಗಲಿದ್ದು, ಅತೀವ ನೋವು ತರಿಸಿದೆ. ಜತೆಗೆ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದರು.

 

ನಂತರ ಸಂಘಟನೆಗಾರರು, ಮಲ್ಲಯ್ಯ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಕ್ಯಾಂಡಲ್ ಹಿಡಿದು ಪಾದಯಾತ್ರೆ ಮಾಡುವ ಮೂಲಕ ಹುತಾತ್ಮ ಸೈನಿಕರಿಗೆ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರು ಸೇರಿದಂತೆ ಜಿ.ಪಂ.ಸದಸ್ಯ ಕೆ.ಮಹೇಶ, ರೈತ ಸಂಘದ ಅಧ್ಯಕ್ಷ ನಜೀರ್ ಸಾಬ್ ಮೂಲಿಮನಿ, ಅಕ್ಬರ್ ಸಾಬ್ ನದಾಫ್, ಶಂಕರಗೌಡ್ ಬೀಳಗಿ, ಬಸಪ್ಪ ಅಮ್ಮನ್ವರ್, ಮಂಜು ತಳವಾರ, ಮಹೆಬುಬ್ ನಡುಲಮನಿ, ಮಲ್ಲಪ್ಪ ಹವಾಲ್ದಾರ್, ಪರಶುರಾಮ ಎಮ್ ಬೊದುರ್, ನಿವೃತ್ತ ಶಿಕ್ಷಕ ಮಲ್ಲಪ್ಪ ಬ್ಯಾಳಿ, ಎನ್. ಬಿ.ಸುಬೇದಾರ್ ಇತರರಿದ್ದರು..!!