ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮದಲ್ಲಿ ನಮ್ಮನ್ನಗಲಿದ ನಟ ಪುನೀತ್ ರಾಜಕುಮಾರ ಇವರ ಸ್ಮರಣಾರ್ಥ ರಾಜ್ಯ ಮಟ್ಟದ ಓಪನ್ ಖೋ ಖೋ ಟೂರ್ನಮೆಂಟ್ ಪಂದ್ಯಾವಳಿ ಯಶಸ್ವಿಯಾಗಿ ಜರುಗಿತು..!
ಪಂದ್ಯಾವಳಿಗೆ ಎನ್ ಸಿ ಪಿ ಪಕ್ಷದ ಮುಖಂಡ ಭರತ್ ರಾಮೇಗೌಡ ಚಾಲನೆ ನೀಡಿದರು. ಬಳಿಕ ಮಾತನಾಡಿ, ಸದೃಢ ದೇಹಕ್ಕೆ ಕ್ರೀಡೆ ಬಹಳ ಮುಖ್ಯವಾಗಿರುತ್ತದೆ. ಗ್ರಾಮೀಣ ಮಟ್ಟದಲ್ಲಿ ಇಂತಹ ಪಂದ್ಯಾವಳಿ ನೆರವೇರಿಸಿದ್ದು ತಂಬಾ ಸಂತೋಷದಾಯಕ ಎಂದರು. ಯುವ ಮುಖಂಡರುಗಳಾದ ಬಸವರಾಜ ಹಳ್ಳಿ, ಶರಣಪ್ಪ ಏಳುಗುಡ್ಡದ, ಈಶಪ್ಪ ಹಿರೇಮನಿ, ನಿಂಗಜ್ಜ, ಮುತ್ತು,ರಹೀಮ, ಕನಕಪ್ಪ, ಯಮನೂರಪ್ಪ, ಮಹಮದ್ ರಫಿ, ಬಸು ಹರಕಂಗಿ, ವಿರುಪಾಕ್ಷಿ, ಬಾಲಜ್ಜ, ಹಜಾನಿ, ಚನ್ನಬಸವ, ಈಶಪ್ಪ ಮತ್ತು ನಿರ್ಣಾಯಕರಾದ ಭೀಮಪ್ಪ ಚಂದ್ರಗಿರಿ, ಯಮನೂರಪ್ಪ, ಕನಕಪ್ಪ, ವೀರೇಶ ಹಾಗೂ ಇತರರಿದ್ದರು.
ಬಹುಮಾನ : ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಬಳ್ಳಾರಿ ತಂಡ,ದ್ವಿತೀಯ ಮಲ್ಲಾಪುರ (ಆನೆಗುಂದಿ) ತೃತೀಯ ಕುಷ್ಟಗಿ ತಂಡಗಳು ಬಹುಮಾನಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದವು.