ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮ ದಿ ವಿಜಡಮ್ ಸ್ಕೂಲ್ ನಲ್ಲಿ
ಶ್ರೀನಿವಾಸ ರಾಮಾನುಜನ್ ರವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ಗಣಿತ ದಿನಾಚರಣೆ ದಿನ ಎಂದು ಆಚರಣೆ ಮಾಡಲಾಯಿತು..!
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಲೆಯ ಅಧ್ಯಕ್ಷ ಶಂಭು ಹಿರೇಮಠ ಮಾತನಾಡಿ, ಶ್ರೀನಿವಾಸ ರಾಮಾನುಜನ್ ಅವರು ಗಣಿತ ವಿಷಯದಲ್ಲಿ ದಿವ್ಯ ಪಾಂಡಿತ್ಯ ಹೊಂದಿದ್ದರು. ಅವರ ಪಾಂಡಿತ್ಯವನ್ನು ಪರಿಗಣಿಸಿದ ಕೇಂದ್ರ ಸರಕಾರ ಅವರ ಜನ್ಮ ದಿನವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿಸಿದೆ ಎಂದರು. ಅವರ ಜೀವನ ಚರಿತ್ರೆ ಕುರಿತು ಮಕ್ಕಳಿಗೆ ವಿವರಣೆ ನೀಡಿದರು. ಬಳಿಕ ಮಕ್ಕಳಿಂದ ಗಣಿತ ವಿಷಯದ ಹಲವು ಮಗ್ಗುಲುಗಳ ಕುರಿತಾದ ಅಣಕು ಪ್ರದರ್ಶಗಳನ್ನು ಸಾಂಸ್ಕೃತಿಕ ಕಾರ್ಯಕ್ರಮದ ರೂಪದಲ್ಲಿ ನೀಡಲಾಗಿತು.
ಶಿಕ್ಷಕಿಯರಾದ ಲಕ್ಷ್ಮೀ ಕುರಟ್ಟಿ , ರೇಷ್ಮಾ ಭಾಗವಾನ ಹಾಗೂ ಅಫ್ರೀನ್ ಮುಚಾಲಿ ಸೇರಿದಂತೆ ಸಿಬ್ಬಂದಿ ವರ್ಗ ಪಾಲಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..!!