ಕೃಷಿ ಪ್ರಿಯ ನ್ಯೂಸ್ |
ಚನ್ನಮ್ಮನ ಕಿತ್ತೂರು : ಇಂದಿನ ದಿನಮಾನಗಳಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದೇ ಅತ್ಯುತ್ತಮ ಸಂಪಾದನೆ ಆಗಿದೆ. ಆರೋಗ್ಯದಿಂದ ಇದ್ದಾಗ ಮಾತ್ರ ಏನೆಲ್ಲಾ ಸಾಧ್ಯ. ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಿ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅನ್ನಪೂರ್ಣ ಅಂಗಡಿ ತಿಳಿಸಿದರು..!
ಚೆನ್ನಮ್ಮನ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾದ ಐಇಸಿ ಚಟುವಟಿಕೆಯಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿಕಾರರಿಗೆ ಗುರುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ದೇಶಿಸಿ ಮಾತನಾಡಿದರು. ಕೆಲಸದ ಒತ್ತಡದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರು ಆಸ್ಪತ್ರೆಗೆ ಹೋಗಲು ಆಗಿರುವುದಿಲ್ಲ. ಹಾಗಾಗಿ ನಿಮ್ಮ ಬಳಿ ನಮ್ಮ ಆರೋಗ್ಯ ಕೇಂದ್ರದ ಸಿಬ್ಬಂದಿ ಸಮೇತ ಆಗಮಿಸಿದ್ದೇವೆ. ಕಾರ್ಯಕ್ರಮ ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಶಿಬಿರ ಉದ್ಘಾಟಿಸಿದ ಅವರಾದಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಜಗದೀಶ ಗೌಡರ ಮಾತನಾಡಿ, ಗ್ರಾಮೀಣ ಪ್ರದೇಶದ ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಗ್ರಾಮಗಳಲ್ಲಿಯೇ ಆರೋಗ್ಯ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಕಿತ್ತೂರಿನ ಸಮುದಾಯ ಆರೋಗ್ಯ ಕೇಂದ್ರದ ಡಾ.ಅಭಿನವ ಮಿಶ್ರಾ, ಕ್ಷಯರೋಗ ತಜ್ಞ ಡಾ.ಮಹೇಶ ದೇವಲತ್ತಿ, ತಾಲೂಕು ಪಂಚಾಯತಿ ತಾಂತ್ರಿಕ ಸಂಯೋಜಕ ವಿನಯಕುಮಾರ್ ಪಾಟೀಲ, ಐಇಸಿ ಸಂಯೋಜಕಿ ಶಿವಲೀಲಾ ಜವಳಿ, ಬಿಎಫ್‌ಟಿ ಬಸವರಾಜ ಹೊಸಮನಿ, ಡಿಓ ಈರಪ್ಪ ಸರದಾರ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.
ಮಾಹಿತಿ : ಶಿವಲೀಲಾ ಜವಳಿ.
ಕಿತ್ತೂರು ತಾಪಂ ಐಇಸಿ
88848 89965