ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ತಾವರಗೇರಾ ಪಟ್ಟಣ ಪಂಚಾಯತಿ ಚುನಾವಣೆ ಹಿನ್ನಲೆಯಲ್ಲಿ ಪಪಂ ಕಚೇರಿಯಲ್ಲಿ ದಿನಾಂಕ 23-12-2021 ರಂದು ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಸಮ್ಮುಖದಲ್ಲಿ ಶೀಲ್ಡ್ ಮಾಡಲಾಗಿದ್ದ ಎರಡು ಮತ ಪೆಟ್ಟಿಗೆಗಳನ್ನು ಓಪನ್ ಮಾಡಲಾಗಿದೆ ಎಂದು ಖಂಡಿಸಿ, ಬಿಜೆಪಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿತು..!
ಚುನಾವಣೆ ಅಧಿಕಾರಿಗಳು ಕಾಂಗ್ರೆಸ್ ಪಕ್ಷದವರೊಂದಿಗೆ ಶಾಮಿಲ್ ಆಗಿ ಮತ ಪೆಟ್ಟಿಗೆಗಳನ್ನು ಓಪನ್ ಮಾಡುವ ಮೂಲಕ ಖೊಟ್ಟಿ ಮತದಾನ ಹುನ್ನಾರ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಸಂಶಯವ್ಯಕ್ತಪಡಿಸಿದರು. ವಿಶೇಷವಾಗಿ ನಂಬರ್ 6 ಮತ್ತು 11 ನೇ ವಾರ್ಡಗಳಲ್ಲಿನ ಮತ ಪೆಟ್ಟಿಗೆಗಳನ್ನು ಮಾತ್ರ ಓಪನ್ ಮಾಡಲಾಗಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋಲುವ ಭಯವಿದೆ. ಕಾಂಗ್ರೆಸ್ ಪಕ್ಷದವರು ಅಧಿಕಾರಿಗಳ ಜೊತೆಗೆ ಶಾಮಿಲಾಗಿ ಕುತಂತ್ರಗಳನ್ನು ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.
ನಾಗರಿಕ ಅಭಿವೃದ್ಧಿ ವೇದಿಕೆ ಮತ್ತು ಬಿಜೆಪಿ ಅಭ್ಯರ್ಥಿಗಳು ಸೇರಿದಂತೆ ನೂರಾರು ಜನ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಪೊಲೀಸರು ಆಗಮಿಸಿ ವಾತಾವರಣ ತಿಳಿಗೊಳಿಸಿದರು. ಮತದಾನ ಮುನ್ನನವೇ ಇಂತಹ ಸಂಶಯಗಳು ಅಭ್ಯರ್ಥಿಗಳನ್ನು ನಿದ್ರೆ ಗೆಡಿ ಸಿ ವೆ