ಕೊಪ್ಪಳ ವಕೀಲರ ಸಂಘದ ಅಧ್ಯಕ್ಷರಾಗಿ ಹಿರಿಯ ವಕೀಲ ಎ.ವಿ.ಕಣವಿ ಆಯ್ಕೆ

 

 

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ತೀವ್ರ ಪೈಪೋಟಿಯಲ್ಲಿ ಜರುಗಿದ ಕೊಪ್ಪಳ ವಕೀಲರ ಸಂಘದ ಚುನಾವಣೆಯಲ್ಲಿ ಹಿರಿಯ ವಕೀಲ ಎ.ವಿ.ಕಣವಿ ಆಯ್ಕೆಯಾಗಿದ್ದಾರೆ..!
ಅಧ್ಯಕ್ಷರ ಆಯ್ಕೆಗಾಗಿ ಜರುಗಿದ ಮತದಾನದಲ್ಲಿ ಸಮೀಪ ಸ್ಪರ್ಧಿ ವಕೀಲ ಪ್ರಕಾಶ ಆನಂದಳ್ಳಿ 133 ಪಡೆದರೆ, ಹಿರಿಯ ವಕೀಲರಾದ ಎ.ವಿ.ಕಣವಿಯವರು 164 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಮೂರು ಮತಗಳು ಕುಲಗೆಟ್ಟಿರುವುದು ವಿಶೇಷ. ಪ್ರಜ್ಞಾವಂತರ ಮತದಾನದಲ್ಲಿಯೂ ಕೂಡಾ ಮತಗಳು ಕುಲಗೆಟ್ಟಿರುವುದು ಚರ್ಚಾ ವಿಷಯ..!!