ಮನೆ ಕಳ್ಳತನ ತಪ್ಪಿಸಲು ಪೊಲೀಸರಿಂದ ಹೊಸ ಟೆಕ್ನಾಲಜಿ ಪರಿಚಯ

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಮನೆ ಕಳ್ಳತನ ತಪ್ಪಿಸಲು ಜಿಎಸ್ ಎಮ್ ಅಲಾರಾಂ ಸಿಸ್ಟಮ್ ಎಂಬ ವಿನೂತನ ಮೊಬೈಲ್ ನೆಟ್ವರ್ಕ್ ಕಾಲಿಂಗ್ – ಸೈರನ್ ಯಂತ್ರ ಮಾರುಕಟ್ಟೆಗೆ ಬಂದಿದ್ದು, ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲೆಯ ಕುಷ್ಟಗಿ ಸರ್ಕಲ್ ಇನ್ಸಫೇಕ್ಟರ್ ನಿಂಗಪ್ಪ ಎನ್.ಆರ್. ಅವರು ತಿಳಿಸಿದ್ದಾರೆ..!

ಈ ಕುರಿತು ತಮ್ಮ ಕಚೇರಿಯಲ್ಲಿ 06-01-2022 ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ಈ ಸಿಸ್ಟಮ್ ಅಳವಡಿಸುವದರಿಂದ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ-ಕಾಲೇಜು ಹಾಗೂ ಒಂಟಿ ಮನೆಗಳಲ್ಲಿ ಕಳ್ಳತನ ನಡೆಯುವದನ್ನ ತಪ್ಪಿಸಬಹುದಾಗಿದೆ ಎಂದು ಹೇಳಿದರು.
ಈ ವಿನೂತನ ಜಿಎಸ್ ಎಂ ಸಿಸ್ಟಮ್ ಅಲ್ಲಿ ಐದು ಮೊಬೈಲ್ ನಂಬರ್ ಗಳನ್ನು ಅಳವಡಿಸಬಹುದಾಗಿದೆ. ಇದನ್ನು ಮನೆಯೊಳಗೆ ಅಳವಡಿಸಿದರೆ 180 ಡಿಗ್ರಿ ವರೆಗೂ ಇದರ ಸೆನ್ಸಾರ್ ವರ್ಕ್ ಮಾಡುತ್ತದೆ. ಮನೆ ಬೀಗ ಹಾಕಿ ಹೊರಗಡೆ ಹೋದಾಗ ಅಪರಿಚಿತರು ಮನೆ ಬಾಗಿಲು ತೆರೆದು ಒಳಗಡೆ ಪ್ರವೇಶಿಸುತ್ತಿದ್ದಂತೆ ನಿಮ್ಮ ಮೊಬೈಲ್ನಲ್ಲಿ ಕಾಲಿಂಗ್ ಸಿಗ್ನಲ್ ಮತ್ತು ಮೆಸೆಜ್ ಬರುತ್ತದೆ. ಅಕಸ್ಮಾತ್ ನಿಮ್ಮ ಮೊಬೈಲ್ ನೆಟ್ವರ್ಕ್ ಪ್ರದೇಶದಲ್ಲಿ ಇರದಿದ್ದರೆ ಇನ್ನುಳಿದ ನಾಲ್ಕು ಮೊಬೈಲ್ ಗಳಿಗೆ ಕಾಲಿಂಗ್ ಹಾಗೂ ಸಂದೇಶ ರವಾನೆಯಾಗುತ್ತದೆ. ಇದರಿಂದ ನೀವು ಎಚ್ಚೆತ್ತುಕೊಳ್ಳಬಹುದು. ಪೊಲೀಸರಿಗೆ ಕೂಡಲೇ ಮಾಹಿತಿ ಕೊಡಬಹುದು. ಅಷ್ಟೇ ಅಲ್ಲದೆ ಈ ಜಿಎಸ್ ಎಂ ಸಿಸ್ಟಮ್ ಸೈರನ್ ಧ್ವನಿವರ್ಧಕ ಹೊಂದಿದ್ದು ಅದರಿಂದ ಅಕ್ಕಪಕ್ಕದ ಮನೆಗಳ ಜನರನ್ನು ಎಚ್ಚರಿಸುತ್ತದೆ. ಇದರಿಂದ ಮನೆಯಲ್ಲಿ ಕಳ್ಳತನ ನಡೆಯುವದನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.
ನೀವು ದೇಶದ ಯಾವುದೇ ಮೂಲೆಯಲ್ಲಿದ್ದರೂ ಐದು ಮೊಬೈಲ್ಗಳ ನೆಟ್ವರ್ಕ್ ಹೊಂದಿರುವ ಜಿಎಸ್ ಎಂ ಸಿಸ್ಟಮ್ ನಿಮಗೆ ಅಪರಿಚಿತರು ಮನೆ ಪ್ರವೇಶಿಸಿರುದನ್ನು ಸೂಚನೆ ಕೊಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಈ ಟೆಕ್ನಾಲಜಿ ಅಳವಡಿಸಿಕೊಳ್ಳಿ ಎಂದು ಕೋರಿದ್ದಾರೆ. ಈಗಾಗಲೇ ಈ ಟೆಕ್ನಾಲಜಿ ದೊಡ್ಡ ನಗರ ಪ್ರದೇಗಳಲ್ಲಿ ಅಳವಡಿಸಲಾಗಿದೆ. ಸಧ್ಯ ನಮ್ಮ ಜಿಲ್ಲೆಯ ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನ ತಾವರಗೇರಾ, ಹನಮಸಾಗರ ಸ್ಟೇಷನ್ ವ್ಯಾಪ್ತಿಯಲ್ಲಿ ಪರಿಚಯಿಸಲಾಗುತ್ತಿದೆ. ಇದನ್ನು ಅಳವಡಿಸುವದರಿಂದ ಕಳ್ಳತನ ತಪ್ಪಿಸಬಹುದಾಗಿದೆ. ಆಸಕ್ತಿ ಉಳ್ಳವರು ಹೆಚ್ಚಿನ ಮಾಹಿತಿಗಾಗಿ ಜೆನ್ಯೂಸ್ ಟೆಕ್ನಾಲಜಿಸ್ ನ ಗಂಗಾಧರ ಮೊ.9148152701 ಈ ನಂಬರ್ ಸಂಪರ್ಕಿಸಿಲು ತಿಳಿಸಿದ್ದಾರೆ.
ಈ ವೇಳೆ ಪಿಎಸ್ಐ ತಿಮ್ಮಣ್ಣ ನಾಯಕ, ಕ್ರೈಂ ಪಿಎಸ್ಐ ಮಾನಪ್ಪ ವಾಲ್ಮೀಕಿ ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು..!!