ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಇಂದಿನ ಆಧುನಿಕ ದಿನಗಳಲ್ಲಿ ಶಿಕ್ಷಕರ ಮೇಲೆ ಗೌರವ ಕಡಿಮೆಯಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನಲ್ಲಿ ಮನ ಕಲಕುವ ಘಟನೆಯೊಂದು ನಡೆದಿದೆ..!
ಗುರುಮಿಠಕಲ್ ತಾಲೂಕಿನ ಕೊಟಗೇರಾ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಂ.ಡಿ ಶಾಹೀದ್ ಬೇರೊಂದು ಶಾಲೆಗೆ ವರ್ಗಾವಣೆಯಾಗಿ ಹೋಗುವಾಗ ಶಾಲೆಯ ಸಹ ಶಿಕ್ಷಕರು, ವಿದ್ಯಾರ್ಥಿಗಳು ಕಣ್ಣೀರಿಡುತ್ತ ಎಂ.ಡಿ ಶಾಹೀದ್ ಅವರನ್ನು ಬೀಳ್ಕೊಡುವ ಮೂಲಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಭಾವನಾತ್ಮಕ ಸಂಬಂಧಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ನಮಗೆ ಚೆನ್ನಾಗಿ ಪಾಠ ಮಾಡ್ತೀರಿ.. ನೀವು ಇನ್ನೂ ಪಾಠ ಮಾಡಬೇಕು. ದಯವಿಟ್ಟು ನೀವು ಹೋಗಬೇಡಿ, ಇಲ್ಲೇ ಇರಿ’ ಸರ್ ಎಂದು ಶಾಲೆಯ ಹಲವಾರು ವಿದ್ಯಾರ್ಥಿಗಳು ಶಿಕ್ಷಕ ಎಂ.ಡಿ ಶಾಹೀದ್ ಅವರ ಬಳಿ ಕಣ್ಣೀರು ಹಾಕುತ್ತಾ ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಎಂತವರ ಕಣ್ಣಂಚಲ್ಲಿಯೂ ನೀರು ಜೀನುಗಿಸುವಂತಿತ್ತು. ಅಂದಹಾಗೆ 13 ವರ್ಷ ಗಳಿಂದ ಗುರುಮಠಕಲ್ ತಾಲೂಕಿನ ಕೊಟಗೇರಾ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಎಂ.ಡಿ ಶಾಹೀದ್ ಅವರು ಕಾರ್ಯನಿರ್ವಹಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಸರಳವಾಗಿ ಪಾಠ ಮಾಡಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು. ಹೀಗಾಗಿ ತಮ್ಮ ನೆಚ್ಚಿನ ಶಿಕ್ಷಕ ವರ್ಗಾವಣೆ ಆಗುತ್ತಿರುವುದು ವಿದ್ಯಾರ್ಥಿಗಳಿಗೆ ನೋವು ತಂದಿತ್ತು. ಬೀಳ್ಕೊಡುವ ಸಂದರ್ಭದಲ್ಲಿ ಸಹಶಿಕ್ಷಕರು, ವಿದ್ಯಾರ್ಥಿಗಳು ಕಣ್ಣೀರು ಹಾಕಿ ಕೆಲವು ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅಳುತ್ತಲೇ ವರ್ಗಾವಣೆ ಯಾಗಿರುವ ಶಿಕ್ಷಕರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ಅಳುವುದನ್ನು ಕಂಡು ಶಿಕ್ಷಕರು ಸಹ ಕಣ್ಣೀರು ಸುರಿಸಿದ್ದಾರೆ. ರೇಖಾ ಬಾಯಿ, ಪ್ರಕಾಶ್ ವಳಾಪೂರ, ಚಂದ್ರಕಾಂತ, ಮಹೇಶ್ ಶಿಕ್ಷಕರು ಇದ್ದರು..!!
(ಸುದ್ದಿ ಕೃಪೆ : ಪ್ರಜಾವಾಣಿ)