ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ತೊಗರಿ ಖರೀದಿಸುವಂತೆ ಒತ್ತಾಯಿಸಿ ರೈತರು ಜಿಲ್ಲೆಯ ತಾವರಗೇರಾ ಪಟ್ಟಣದ ಎಪಿಎಂಸಿ ಬೆಂಬಲ ಬೆಲೆ ಖರೀದಿ ಕೇಂದ್ರದ ಮುಂಭಾಗದಲ್ಲಿ ಕೆಲ ಸಮಯ ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿತು..!
ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರದ ಮುಂಭಾಗದಲ್ಲಿ ತೊಗರಿ ದಾಸ್ತಾನೊಂದಿಗೆ ಬೆಳಗಿನಿಂದ ಜಮಾಯಿಸಿದ ರೈತರಿಗೆ ಖರೀದಿ ಕೇಂದ್ರದವರು ತೊಗರಿ ಖರೀದಿಗೆ ಹಿಂದೇಟು ಹಾಕಿರುವುದೇ ಪ್ರತಿಭಟನೆಗೆ ಮುಖ್ಯ ಕಾರಣವಾಗಿದೆ. ಕಪ್ಪಾದ, ಕಂಡಿಕೆಯ ಹಾಗೂ ಜೊಳ್ಳು ತೊಗರಿ ಖರೀದಿಮಾಡಲು 6300 ರೂಪಾಯಿಗಳಿಗೆ ಒಪ್ಪದಿದ್ದಾಗ ರೈತರು ಹಾಗೂ ಕೇಂದ್ರದ ಅಧಿಕಾರಿಗಳ ಮಧ್ಯದಲ್ಲಿ ಜಟಾಪಟಿ ನಡೆದಿದೆ. ಘಟನೆ ವಿಕೋಪಕ್ಕೆ ತಿರುಗಿ ರೈತರು ಕೆಲ ಸಮಯ ರಾಜ್ಯ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಸ್ಥಳೀಯ ಪಿಎಸ್ ಐ ವೈಶಾಲಿ ಜಳಕಿ ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು..!!