ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : 17-01-2022 ರಂದು ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರದ ಶ್ರೀ ಗವಿಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ ಹಿಂದಿ ವಿಷಯದಲ್ಲಿ ಸಮತೋಲನ ಆಹಾರದ ಪಾಠವನ್ನು ಪ್ರಾತ್ಯಕ್ಷಿಕೆ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು..!
ಹಿಂದಿ ವಿಷಯದಲ್ಲಿ ಬಹಳಷ್ಟು ನೈಪುಣ್ಯತೆ ಹೊಂದಿರುವ ಹಾಗೂ ತಾಲೂಕಿನ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾದ ಶಾಲೆಯ ಹಿಂದಿ ವಿಷಯದ ಹಿರಿಯ ಶಿಕ್ಷಕರಾದ ಶಿವಾನಂದ ಹಿರೇಮಠ ಇವರ ಮಾರ್ಗದರ್ಶನದಲ್ಲಿ ಈ ವಿಶಿಷ್ಟ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿಗಳಿಗೆ ಭಾಷಾ ಜ್ಞಾನದ ಜೊತೆಗೆ ಪಠ್ಯದಲ್ಲಿ ಆಸಕ್ತಿ ಬೆಳವಣಿಗೆಗೆ ಇಂತಹ ವಿಶಿಷ್ಟ ಕಾರ್ಯಕ್ರಮಗಳ ನೆರವು ಆಗಲಿವೆ. ಪ್ರತಿ ದವಸ ದಾನ್ಯಗಳಿಂದ ಹಿಡಿದು, ತರಹವೇ ಆಹಾರಗಳ ವಿಶಿಷ್ಟ ಹೆಸರುಗಳ ಪರಿಚಯವಾಗಲಿಕ್ಕೆ ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಕ್ರಿಯಾಶೀಲತೆ ಜೊತೆಗೆ ಜ್ಞಾನಕ್ಕೆ ಪೂರಕವಾಗಲಿದೆ ಎಂದು ಪತ್ರಿಕೆಗೆ ಶಿಕ್ಷಕ ಶಿವಾನಂದ ಹಿರೇಮಠ ಅಭಿಪ್ರಾಯವ್ಯಕ್ತಪಡಿಸಿದರು. ಅಲ್ಲದೆ, ಬಿಸಿಯೂಟ ಅಡುಗೆದಾರರನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಪೌಷ್ಟಿಕ ಆಹಾರ ಹಾಗೂ ಆಹಾರದಲ್ಲಿನ ಪೌಷ್ಟಿಕಾಂಶದ ಬಗ್ಗೆ ಪರಿಚಯ ಮಾಡಿಕೊಡಲಾಗಿತು. ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ಜಂಕ್ ಫುಡ್ ಇತ್ಯಾದಿಗಳ ಸ್ಥೂಲ ಪರಿಚಯವನ್ನು ಕೂಡಾ ವಿದ್ಯಾರ್ಥಿಗಳಿಗೆ ಮಾಡಿಕೊಡಲಾಗಿತು. ಕಾರ್ಯಕ್ರಮದಲ್ಲಿ ತರಹವೇ ಹಾರಿ ಆಹಾರಗಳು, ದಾನ್ಯಗಳು ಸೇರಿದಂತೆ ಇತ್ಯಾದಿಗಳ ಪ್ರದರ್ಶನ ಆಕರ್ಷಣೆಯ ಕೇಂದ್ರವಾಗಿತ್ತು.
ಮುಖ್ಯಗುರು ಎಸ್.ಜಿ.ಕಡೇಮನಿ, ದೈಹಿಕ ಶಿಕ್ಷಕ ವಿ.ಎಸ್.ಕಾಡಗಿಮಠ, ಎಸ್.ವಾಯ್.ಕಂಚಿ, ಸವಿತಾ ಹಿರೇಮಠ, ಅಮೃತಾ, ಸಂತೋಷ, ಗುರುಬಸಯ್ಯ ಹಿರೇಮಠ, ಪ್ರಲ್ಹಾದ ದಾಸರ, ತಪಸೀಮ್ ಫಾತೀಮಾ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು..!!