ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕೊರೋನಾ ವೈರಸ್ ಹರಡುವ ಮುಂಜಾಗ್ರತೆಯ ಹಿನ್ನೆಲೆಯಲ್ಲಿ ಸೂರ್ಯೋದಯ ಮುನ್ನವೇ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವ ಜರುಗಿದೆ..!
ಕೊರೋನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿರುವ ಕಡ್ಡಾಯ ನಿಯಮ ಪಾಲಿಸುವುದರ ಜೊತೆಗೆ ಸರಳ ಹಾಗೂ ಸಂಪ್ರದಾಯದಂತೆ ಬ್ರಾಹ್ಮೀ ಮುಹೂರ್ತ 4.48 ರ ಸಮಯಕ್ಕೆ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಗಿದೆ. ಲಕ್ಷಾಂತರ ಜನ ಭಕ್ತರು ಸೇರುವ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಈ ದಿಟ್ಟ ಕ್ರಮದಿಂದ ರಾಜ್ಯದಲ್ಲಿಯೇ ಮತ್ತೊಮ್ಮೆ ಶ್ರೀಗಳು ಮಾದರಿಯಾಗಿದ್ದಾರೆ.
ಅತ್ಯಂತ ಸರಳವಾಗಿ ರಥೋತ್ಸವಕ್ಕೆ ಚಾಲನೆ ದೊರಕಿತು. ಗವಿಸಿದ್ಧೇಶ್ವರನ ನಾಮದ ಘೋಷಣೆ ಮುಗಿಲು ಮುಟ್ಟಿತ್ತು. ಪೊಲೀಸ್ ಸರ್ಪಗಾವಲಿನ ಮಧ್ಯೆ ರಥೋತ್ಸವ ಜರುಗಿತು. ಸಾಯಂಕಾಲ 5 ಗಂಟೆಗೆ ಲಕ್ಷಾಂತರ ಜನರ ಮಧ್ಯೆ ಜರುಗಬೇಕಾಗಿದ್ದ ರಥೋತ್ಸವ ಅತ್ಯಂತ ಸರಳವಾಗಿ ಜರುಗಿರುವುದು ಐತಿಹಾಸಿಕ ದಾಖಲೆ ಪುಟ ಸೇರಿತು..!!