ಗವಿಮಠದಲ್ಲಿ ಸೇವೆಗೈದ ಬಯ್ಯಾಪೂರು

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಾಹಾ ಜಾತ್ರೆಯಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ದಾಸೋಹದಲ್ಲಿ ಭಕ್ತಾದಿಗಳಿಗೆ ಉಣಬಡಿಸುವ ಸೇವೆಗೈದಿದ್ದು ವಿಶೇಷವಾಗಿತ್ತು..!

ದಕ್ಷಿಣ ಭಾರತದ ಕುಂಭ ಮೇಳ ವೆಂದು ಖ್ಯಾತಿ ಗಳಿಸಿದ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ಜಾತ್ರೆಯನ್ನು ಕಣ್ಣು ತುಂಬಿಕೊಂಡ ಬಯ್ಯಾಪೂರು,
ಸಾಮಾನ್ಯ ಭಕ್ತರಂತೆ ಪ್ರಸಾದ ಸೇವೆಗೈದಿದ್ದನ್ನು ನೋಡಿದ ಜನಸಾಮಾನ್ಯರು ಅವರ ಮಠದ ಮೇಲಿನ ಭಕ್ತಿಗೆ ಮೆಚ್ಚಿಕೊಂಡರು. ಬಯ್ಯಾಪೂರು ಗದ್ದುಗೆ ದರ್ಶನ ಪಡೆದ ಬಳಿಕ, ಪ್ರಸಾದದ ಪಾಕ ಶಾಲೆಗೆ ಭೇಟಿ ನೀಡಿದರು. ಅತ್ಯಂತ ಸರಳವಾದ ಆಚರಣೆಗೆ ಹೆಸರಾಗಿರುವ ಗವಿಮಠದ ಜಾತ್ರೆ ಕೊವಿಡ್ ನಿಯಮ ಪಾಲಿಸುವಲ್ಲಿ ಕೂಡಾ ಯಶಸ್ವಿಯಾಗಿದೆ..!!