ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಟ್ಟಲಕೋಡ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಅಪಾಯ ಮಟ್ಟದಲ್ಲಿರುವ ಮೇಲ್ಮಟ್ಟದ ನೀರಿನ ಟ್ಯಾಂಕ್ ತೆರವಿಗಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ..!
2004 ರಲ್ಲಿ ಜಾರಿಗೆ ಬಂದಿದ್ದ ಜಲ ನಿರ್ಮಲ ಯೋಜನೆಯಲ್ಲಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜಗಾಗಿ ನಿರ್ಮಿಸಿದ ಮೇಲ್ಮಟ್ಟದ ನೀರಿನ ತೊಟ್ಟಿಯ ಕಾಮಗಾರಿ ಕಳಪೆ ಯಾಗಿರುವ ಹಿನ್ನಲೆಯಲ್ಲಿ ಟ್ಯಾಂಕಿನ ಏಣಿ ಭಾಗಗಳು ಶಿಥಿಲಗೊಂಡು ಬೀದ್ದು ಹೋಗಿವೆ. ಅಲ್ಲದೆ, ಟ್ಯಾಂಕಿನ ಮೂಲ ಅವಶೇಷಗಳು ಬೀಳುವ ಹಂತದಲ್ಲಿವೆ. ಇದರಿಂದ ಶಾಲೆಯ 364 ವಿದ್ಯಾರ್ಥಿಗಳು ಜೀವ ಭಯದಿಂದ ಪಾಠ ಕೇಳುವಂತಾಗಿದೆ. ಟ್ಯಾಂಕ್ ಕಡೆಗೆ ವಿದ್ಯಾರ್ಥಿಗಳನ್ನು ಹೋಗದಂತೆ ತಡೆಯುವುದು ನಿತ್ಯ ಶಿಕ್ಷಕರ ಕಾರ್ಯವಾಗಿಬಿಟ್ಟಿದೆ. ಇದರಿಂದ ಶಿಕ್ಷಕ ಸಮೂಹ ಬೇಸತ್ತು ಹೋಗಿದೆ. ಟ್ಯಾಂಕ್ ನಿರ್ಮಾಣವಾದಾಗಿನಿಂದ ಇಲ್ಲಿಯವರೆಗೂ ಟ್ಯಾಂಕ್ ಮೂಲಕ ಹನಿ ನೀರು ಗ್ರಾಮಕ್ಕೆ ಬಳಕೆಯಾಗಿಲ್ಲ. ಆದರೆ, ಸಂಬಂಧಿಸಿದ ಇಲಾಖೆಯವರು ಮಾತ್ರ ಅಪಾಯ ಮಟ್ಟದಲ್ಲಿರುವ ಟ್ಯಾಂಕ್ ತೆರವ ಕಾರ್ಯಕ್ಕೆ ಇಲ್ಲಿಯವರೆಗೂ ಮುಂದಾಗಿಲ್ಲ. ಟ್ಯಾಂಕ್ ತೆರವುಗೊಳಿಸುವುದಕ್ಕೆ ಗ್ರಾಮಸ್ಥರು ಸೇರಿದಂತೆ ಶಾಲಾ ಆಡಳಿತ ಮಂಡಳಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಕೂಡಾ ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ವಿಪರ್ಯಾಸದ ಸಂಗತಿ..!!